ಉಡುಪಿ: ವಿಪ್ರ ಸಂಘಟನೆಗಳನ್ನು ಬಲಪಡಿಸಬೇಕು ಎಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್. ಎಸ್. ಸಚ್ಚಿದಾನಂದಮೂರ್ತಿ ಕರೆ ನೀಡಿದರು.
ಈಚೆಗೆ ಪುತ್ತಿಗೆ ಮಠದಲ್ಲಿ ನಡೆದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಬ್ರಾಹ್ಮಣ ಸಮಾಜದ ಸದುಪಯೋಗಕ್ಕಾಗಿ ಸರ್ಕಾರ ರೂಪಿಸಿದ ಸಾಂದೀಪನಿ ಶಿಷ್ಯ ವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ವಿಪ್ರ ವಸತಿ ಯೋಜನೆ, ಜಾತಿ- ಆದಾಯ ಪ್ರಮಾಣಪತ್ರ, ಆಚಾರ್ಯತ್ರಯ ವೇದ- ಶಿಷ್ಯ ವೇತನ ಮುಂತಾದ ವಿಶೇಷ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಭಟ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಮ ಉಡುಪ ಇದ್ದರು.
ಇದೇ ಸಂದರ್ಭದಲ್ಲಿ ಚಿತ್ರಕಲೆ, ರಂಗೋಲಿ ಪ್ರವೀಣ ಡಾ| ಉಪಾಧ್ಯಾಯ ಮೂಡುಬೆಳ್ಳೆ ಮತ್ತು ಭಾರತೀಯ ಭೂಸೇನೆ ಕ್ಯಾಪ್ಟನ್ ಡಾ| ಕ್ಯಾ| ಎಲ್. ರಾಮಚಂದ್ರ ಪರ್ಕಳ ಅವರನ್ನು ಗೌರವಿಸಸಲಾಯಿತು.
ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ ವಾರ್ಷಿಕ ವರದಿ ಮಂಡಿಸಿ, ಕೋಶಾಧಿಕಾರಿ ಶಾಂತರಾಮ ಭಟ್ ಲೆಕ್ಕಪತ್ರ ಮಂಡಿಸಿದರು. ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯ ಕುದಿ ಶ್ರೀನಿವಾಸ ಭಟ್ ವಂದಿಸಿದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ವಿವಿಧ ವಲಯಗಳ ಕಾರ್ಯಕಾರಿ ಸಮಿತಿ ಸದಸ್ಯರು, ಸಂಘಟನಾ ಕಾರ್ಯದರ್ಶಿಗಳು, ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಇದ್ದರು