ಮಂಗಳೂರು: ಯಾವುದೇ ವೃತ್ತಿನಿರತರಿಗೆ ಅವರದ್ದೇ ಆದ ಒಂದು ವೃತ್ತಿ ಪರ ಸಂಘಟನೆ ಅತೀ ಅಗತ್ಯ ಎಂದು ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್ ಶೆಟ್ಟಿ ನಾವುಂದ ಪ್ರತಿಪಾದಿಸಿದರು.
ಇಲ್ಲಿನ ಸೈಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್ ನಲ್ಲಿ ನಡೆದ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ನ 30ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸ್ಥಾಪಕ ಸದಸ್ಯರು ಕಟ್ಟಿ ಬೆಳೆಸಿದ ಈ ಸಂಘಟನೆ 3 ದಶಕಗಳ ಸುದೀರ್ಘಾವದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸದಸ್ಯರೆಲ್ಲರ ನಿರಂತರ ಸಹಕಾರ ಕಾರಣ. ಇದು ನಿರಂತರವಾಗಿರಲಿ. ಸಂಘಟನೆಯ ಯಶಸ್ಸು ಇದೇ ಹಾದಿಯಲ್ಲಿ ಮುನ್ನಡೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಲ್ಲಾಧ್ಯಕ್ಷ ಕರಂದಾಡಿ ಶ್ರೀಧರ ಶೆಟ್ಟಿಗಾರ್, ಪ್ರತಿಯೊಬ್ಬ ಸದಸ್ಯನೂ ಸಂಘಟನೆಯಿಂದ ತನಗೇನು ಲಾಭ ಎಂದು ಯೋಚಿಸುವುದಕ್ಕಿಂತ ತಾನು ಸಂಘಟನೆಗೆ ಏನು ನೀಡಬಲ್ಲೆ ಎಂದು ಯೋಚಿಸಿದರೆ ಸಂಘಟನೆಯ ಅಭಿವೃದ್ಧಿ ಸಾಧ್ಯ ಎಂದರು.
ಕೊರೋನಾ ಸಂದಿಗ್ಧ ಸಮಯದಲ್ಲಿ ವೃತ್ತಿಗೆ ಹೊಡೆತ ಬಿದ್ದರೂ ನಮ್ಮ ಸಂಘಟನೆಯ ಬಲ ಕುಂದದಂತೆ ಎಲ್ಲಾ ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳೊಂದಿಗೆ ಎಲ್ಲಾ ಸದಸ್ಯರ ನಿರಂತರ ಸಂಪರ್ಕದಲ್ಲಿದ್ದು ಸದಸ್ಯರ ಒಳಿತಿಗಾಗಿ ಬಹಳಷ್ಟು ಶ್ರಮ ವಹಿಸಲಾಗಿದೆ. ಇದು ಪ್ರಶಂಸನೀಯ ಎಂದರು.
ಸ್ಥಾಪಕ ಸದಸ್ಯ ವಿಠಲ ಚೌಟ, ಛಾಯಾ ಸುರಕ್ಷಾ ಚಾರಿಟೇಬಲ್ ಟ್ರಸ್ಟ್ ಗೆ ಚಾಲನೆ ನೀಡಿದರು. ತುರ್ತು ರಕ್ತದಾನಿಗಳ ಗುಂಪು ಮಾಹಿತಿಯನ್ನು ಮಾಜಿ ಅಧ್ಯಕ್ಷ ಕರುಣಾಕರ ಕಾನಂಗಿ ಬಿಡುಗಡೆಗೊಳಿಸಿದರು. ಕಲಿಕೆಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳಿಗೆ ಧನ ಸಹಾಯ ಮಾಡಲಾಯಿತು.
ಮಾಜಿ ಅಧ್ಯಕ್ಷರಾದ ಶಿವರಾಮ ಕಡಬ, ಕೆ. ವಾಸುದೇವ ರಾವ್, ಜಗನ್ನಾಥ ಶೆಟ್ಟಿ, ಗೋಪಾಲ ಸುಳ್ಯ, ವಿಲ್ಸನ್ ಬೆಳ್ತಂಗಡಿ, ದಯಾನಂದ ಪಯ್ಯಡೆ, ಸ್ಥಾಪಕ ಸದಸ್ಯರಾದ ಜಯಕರ ಸುವರ್ಣ, ಕೀರ್ತಿ ಮಂಗಳೂರು, ಸಲಹಾ ಸಮಿತಿ ಸದಸ್ಯ ಶಿವ ಕೆ. ಅಮೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ಜಿಲ್ಲಾ ಪ್ರಧಾನ ಕೋಶಾಧಿಕಾರಿ ಆನಂದ ಎಂ. ಬಂಟ್ವಾಳ, ಉಪಾಧ್ಯಕ್ಷ ನಾಗರಾಜ ರಾಯಪ್ಪನ ಮಠ ಕುಂದಾಪುರ, ಜೊತೆ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ ಕಾಪು, ಅಜಯ್ ಮಂಗಳೂರು, ಸಂಘಟನಾ ಕಾರ್ಯದರ್ಶಿಗಳಾದ ಸುಂದರ ಪೂಜಾರಿ ಕೊಳಲಗಿರಿ, ಲೋಕೇಶ್ ಬಿ. ಎಂ., ಕ್ರೀಡಾ ಕಾರ್ಯದರ್ಶಿಗಳಾದ ತನುಂಜಯ ರಾವ್, ಪ್ರಕಾಶ್ ಬ್ರಹ್ಮಾವರ, ಪ್ರಸಾದ್ ಐಸಿರಿ ಕಾರ್ಕಳ, ಉದಯ ಮುಂಡ್ಕೂರು, ಮಾಧ್ಯಮ ಪ್ರತಿನಿಧಿ ವಿಲ್ಫ್ರೆಡ್ ಮೆಂಡೋನ್ಸ್, ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲ್, ಕಿರಣ್ ಕುಮಾರ್ ಬೆಳ್ತಂಗಡಿ, ಪಿ.ಆರ್.ಒ ಹರೀಶ್ ಪುಣಚ್ಚ ಹಾಗೂ ಪ್ರಮೋದ್ ಸುವರ್ಣ ಕಾಪು, ವಿವಿಧ ವಲಯಗಳ ಅಧ್ಯಕ್ಷರಾದ ರಾಜಾ ಮಠದಬೆಟ್ಟು ಕುಂದಾಪುರ, ಹಿರಿಯಣ್ಣ ಬ್ರಹ್ಮಾವರ, ಮಧು ಮಂಗಳೂರು, ಚಿದಾನಂದ ಉಳ್ಳಾಲ, ಪ್ರಕಾಶ್ ಕೊಡಂಕೂರು ಉಡುಪಿ, ಸುಧಾಕರ ಬೆಳ್ತಂಗಡಿ ಸುಳ್ಯ, ಸುರೇಶ್ ಕೌಡಂಗೆ ಬೆಳ್ತಂಗಡಿ, ರವಿ ಮಾನಸ ಮೂಡುಬಿದಿರೆ, ಭಾಸ್ಕರ ಕುಲಾಲ್ ಕಾರ್ಕಳ, ವೀರೇಂದ್ರ ಪೂಜಾರಿ ಕಾಪು, ಜಯಕರ ಸುವರ್ಣ ಸುರತ್ಕಲ್, ಹರೀಶ್ ಎಲಿಯ, ನವೀನಚಂದ್ರ ಮೂಲ್ಕಿ, ಕುಮಾರಸ್ವಾಮಿ ಬಂಟ್ವಾಳ ಇದ್ದರು.
ಉಪಾಧ್ಯಕ್ಷ ದೇವರಾಜ ಶೆಟ್ಟಿ ಸ್ವಾಗತಿಸಿದರು. ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು ವಂದಿಸಿದರು. ದಿವಾಕರ ಕಟೀಲು ಪ್ರಾರ್ಥಿಸಿದರು. ರಾಘವೇಂದ್ರ ಸೇರಿಗಾರ ಹಾಗೂ ಬಬಿತಾ ಲತೀಶ್ ಮಂಗಳೂರು ನಿರೂಪಿಸಿದರು