Wednesday, July 6, 2022
Home ಸಮಾಚಾರ ರಾಜ್ಯ ವಾರ್ತೆ ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ಅಭಿನಂದನೆ!

ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ಅಭಿನಂದನೆ!

ಕೋಟ ಶ್ರೀನಿವಾಸ ಪೂಜಾರಿಗೆ ಕಾಂಗ್ರೆಸ್ ಅಭಿನಂದನೆ!

(ಸುದ್ದಿಕಿರಣ ವರದಿ)
ಉಡುಪಿ: ಮೂರನೇ ಬಾರಿಗೆ ಕರ್ನಾಟಕ ರಾಜ್ಯ ಮಂತ್ರಿ ಮಂಡಲದಲ್ಲಿ ಸಚಿವರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕಾಂಗ್ರೆಸಿಗರೂ ಅಭಿನಂದಿಸಿದ್ದಾರೆ!

ಕುಂದಾಪುರ ಶೇಡಿಮನೆ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಕೋಟ ಅವರಿಗೆ ಶುಭ ಹಾರೈಸಿ ಅಳವಡಿಸಿರುವ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಂಪಲ್ ಶ್ರೀನಿವಾಸ ಎಂದು ವಿರೋಧ ಪಕ್ಷಗಳಿಂದಲೂ ಕರೆಯಲ್ಪಡುವ ಕೋಟ ಶ್ರೀನಿವಾಸ ಪೂಜಾರಿ ಪ್ರಾಮಾಣಿಕ ಸಚಿವ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಮುತ್ಸದ್ಧಿ ರಾಜಕಾರಣಿಗಳಾದ ಡಾ. ವಿ. ಎಸ್. ಆಚಾರ್ಯ, ಆಸ್ಕರ್ ಫೆರ್ನಾಂಡಿಸ್ ಅವರಂತೆ ಕೋಟ ಶ್ರೀನಿವಾಸ ಪೂಜಾರಿ ಅಜಾತಶತ್ರು ಎಂಬ ಮಾತಿಗೆ ಈ ಬ್ಯಾನರ್ ಪುಷ್ಟಿ ನೀಡುತ್ತಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!