Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಅಂಗನವಾಡಿ ನೌಕರರಿಗೂ ಚುನಾವಣೆ ಸ್ಪರ್ಧೆ ಹಕ್ಕು: ಆಗ್ರಹ

ಅಂಗನವಾಡಿ ನೌಕರರಿಗೂ ಚುನಾವಣೆ ಸ್ಪರ್ಧೆ ಹಕ್ಕು: ಆಗ್ರಹ

ಉಡುಪಿ: ಅಂಗನವಾಡಿ ನೌಕರರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ನೌಕರರ ಸಂಘ ವತಿಯಿಂದ ಸೋಮವಾರ ಜಿಲ್ಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಮುಂದಾಳು ಸುಶೀಲ ನಾಡ, ಕೊರೊನಾ ಸೋಂಕಿನಿಂದ ಮೃತಪಟ್ಟ ಅಂಗನವಾಡಿ ನೌಕರರು ಹಾಗೂ ಇತರ ಫ್ರಂಟ್ ಲೈನ್ ಕಾರ್ಯಕರ್ತರ ವಿಮೆಗೂ ಸರ್ಕಾರ ವ್ಯತ್ಯಾಸ ಮಾಡಿದೆ. ಆಶಾ ಕಾರ್ಯಕರ್ತೆಯರಿಗೆ 50 ಲಕ್ಷ ಪರಿಹಾರ ಕೊಡುತ್ತದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರಿಗೆ 30 ಲಕ್ಷ ಪರಿಹಾರ ನೀಡುತ್ತದೆ. ಆ ವ್ಯತ್ಯಾಸ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ಪೋಷನ್ ಟ್ರ್ಯಾಕರ್ ಪ್ರಕ್ರಿಯೆಯನ್ನು ಸರ್ಕಾರ ಜಾರಿಗೆ ತಂದಿದ್ದು ಮೊಬೈಲ್ ಆ್ಯಪ್ ನಲ್ಲಿ ವಿವರ ನೋಂದಾಯಿಸಿದ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ಸಿಗುತ್ತದೆ. ಮಾಹಿತಿ ಆಪ್ ಲೋಡ್ ಮಾಡದ ಅಂಗನವಾಡಿ ಸಹಾಯಕಿಯರ ಗೌರವಧನ ಕಡಿತಗೊಳಿಸುವುದಾಗಿ ಹೇಳಲಾಗುತ್ತಿದೆ. ಪೋಷನ್ ಟ್ರ್ಯಾಕರ್ ತೆಗೆದುಹಾಕುವಂತೆ ಆಗ್ರಹಿಸಿದರು.

ಕೇಂದ್ರ ಸರ್ಕಾರ ನ್ಯೂಟ್ರಿಕ್ ಗಾರ್ಡನ್ ಗಾಗಿ ಬೀಜಗಳನ್ನು ಕೊಡುತ್ತಿದೆ. ಆದರೆ, ಬಹಳಷ್ಟು ಮಂದಿ ಬಾಡಿಗೆ ಕಟ್ಟಡದಲ್ಲಿದ್ದಾರೆ. ಜಾಗದ ಕೊರತೆ ಇದೆ. ಈ ಯೋಜನೆ ಅನುಷ್ಠಾನಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಉದ್ಯೋಗ ಖಾಯಮಾತಿ, ನಿವೃತ್ತಿ ನಂತರ ಪಿಂಚಣಿ ಕೊಡುವಂತೆ ಆಗ್ರಹಿಸಿದರು.

ಅಸ್ತಿತ್ವದಲ್ಲಿರುವ ಸೌಲಭ್ಯಗಳ ಅನುಷ್ಠಾನ, ಕುಂದುಕೊರತೆ ಸಮಿತಿ ರಚನೆಗೂ ಸುಶೀಲ ನಾಡ ಒತ್ತಾಯಿಸಿದರು.

ಪ್ರತಿಭಟನೆ ನೇತೃತ್ವವನ್ನು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಗೀತಾ ಪಂಗಾಳ, ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕಾರ್ಯದರ್ಶಿ ಪ್ರಮೀಳಾ, ಆಶಾಲತಾ, ಯಶೋದ ಮೊದಲಾದವರು ವಹಿಸಿದ್ದರು.

ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!