Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ `ಸಂಘಟಿತ ಯತ್ನದಿಂದ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ'

`ಸಂಘಟಿತ ಯತ್ನದಿಂದ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ’

ಉಡುಪಿ: ರೋಗ ಬಾರದಂತೆ ತಡೆಗಟ್ಟುವುದು ರೋಗ ಗುಣಪಡಿಸುವುದಕ್ಕಿಂತ ಉತ್ತಮ ಎಂಬ ಮಾತಿನಂತೆ ಕೋವಿಡ್ 19 ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಿ, ತುರ್ತು ಅಗತ್ಯತೆಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘಟಿತ ಪ್ರಯತ್ನದಿಂದ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಕ್ಷೇತ್ರಾಧಿಕಾರಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.

ಡಾ. ಬಲ್ಲಾಳ್ ನೇತೃತ್ವದಲ್ಲಿ ಉಡುಪಿ ನಗರ ಆರಕ್ಷಕ ಠಾಣೆ ಮಾರ್ಗದರ್ಶನದಲ್ಲಿ ಯುವಕ ಮಂಡಲ ಮತ್ತು ವಿವಿಧ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಾಚರಿಸಲಿರುವ ಕೋವಿಡ್ 19 ಹೆಲ್ಪ್ ಡೆಸ್ಕ್ ಅಂಬಲಪಾಡಿ ತಂಡಕ್ಕೆ ಅಂಬಲಪಾಡಿ ದೇವಸ್ಥಾನದ ಶ್ರೀ ಜನಾರ್ದನ ರಂಗ ಮಂಟಪದಲ್ಲಿ ಚಾಲನೆ ನೀಡಿ ಮಾತನಾಡಿದರು.

ಇಂದು ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಜೊತೆಗೆ ಮನೆಯೊಳಗೂ ಮಾಸ್ಕ್ ಧರಿಸುವ ಅಗತ್ಯವಿದೆ. ಈ ಸಂದಿಗ್ದ ಸನ್ನಿವೇಶದಲ್ಲಿ ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮತ್ತು ಆರಕ್ಷಕ ಸಿಬ್ಬಂದಿಗಳ ಶ್ರಮ ಪ್ರಶಂಸನೀಯ. ಕೋವಿಡ್ ಹೆಲ್ಪ್ ಡೆಸ್ಕ್ ಅಂಬಲಪಾಡಿ ಯಶಸ್ವೀ ಕಾರ್ಯಾಚರಣೆಗೆ ಅಂಬಲಪಾಡಿ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರವಿದೆ. ಬದ್ಧತೆ ಮತ್ತು ಕ್ರಿಯಾಶೀಲತೆಯಿಂದ ಕೋವಿಡ್ ಹೆಲ್ಪ್ ಡೆಸ್ಕ್ ತಂಡ ಸಾರ್ಥಕ ಸೇವೆ ಸಲ್ಲಿಸುವಂತಾಗಲಿ ಎಂದವರು ಹಾರೈಸಿದರು.

ಉಡುಪಿ ನಗರ ಆರಕ್ಷಕ ಠಾಣೆ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ 19 ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಜನತೆ ಸ್ವಯಂ ಜಾಗೃತರಾಗಿ ಸರ್ಕಾರದ ನಿಯಮ ಪಾಲಿಸುವುದು ಅತ್ಯಗತ್ಯ. ಉಡುಪಿ ನಗರ ವ್ಯಾಪ್ತಿಯ ವಿವಿಧ ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆದಿದ್ದು, ಇದೀಗ ಅಂಬಲಪಾಡಿ ಪರಿಸರದಲ್ಲಿ ಎಲ್ಲರ ಸಹಕಾರದೊಂದಿಗೆ ಕೋವಿಡ್ 19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಯುವಕ ಮಂಡಲದ ಕಚೇರಿಯಲ್ಲಿ ಕಾರ್ಯಾಚರಿಸಲಿದೆ. ಕೋವಿಡ್ ಸಂಬಂಧಿತ ಮಾಹಿತಿ ಮತ್ತು ತುರ್ತು ನೆರವಿಗಾಗಿ ಜನತೆ ಈ ಹೆಲ್ಪ್ ಡೆಸ್ಕ್ ನ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್,
ಉಡುಪಿ ನಗರ ಆರಕ್ಷಕ ಠಾಣೆ ಸಹಾಯಕ ಉಪನಿರೀಕ್ಷಕ ಜಯಕರ ಎ., ಆರಕ್ಷಕ ಸಿಬ್ಬಂದಿಗಳಾದ ಮಹಾಲಿಂಗ ಪಾತ್ರೋಟ್ ಮತ್ತು ಚೇತನ್ ಎಸ್., ಕೋವಿಡ್ 19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಪ್ರಮುಖರಾದ ವಿಶುಕುಮಾರ್ ಶೆಟ್ಟಿ, ಕೀರ್ತಿ ಶೆಟ್ಟಿ, ಯೋಗೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಾಮನ್ ಪಾಲನ್, ರಾಜೇಂದ್ರ ಪಂದುಬೆಟ್ಟು, ಸೋಮನಾಥ್ ಬಿ. ಕೆ., ಪ್ರವೀಣ್ ಉಪಾಧ್ಯ, ಅಜಿತ್ ಕಪ್ಪೆಟ್ಟು, ಹರೀಶ್ ಆಚಾರ್ಯ, ಪ್ರಶಾಂತ್ ಕೆ. ಎಸ್., ಕೃಷ್ಣ ಅಂಬಲಪಾಡಿ, ಜಗದೀಶ್ ಆಚಾರ್ಯ, ಶ್ರೀಕಾಂತ ಶೆಟ್ಟಿ, ರಾಜೇಶ್ ಸುವರ್ಣ, ಲಕ್ಷ್ಮಣ ಪೂಜಾರಿ, ಭರತ್ ರಾಜ್ ಕೆ. ಎನ್., ರಿಕೇಶ್ ಪಾಲನ್, ಗಣೇಶ್ ಶೆಣೈ, ಗಿರೀಶ್ ಅಮೀನ್, ಅಜಯ್ ಕಪ್ಪೆಟ್ಟು, ಸುಜಿತ್ ಕಪ್ಪೆಟ್ಟು, ಹರೀಶ್ ಅಂಬಲಪಾಡಿ, ಶ್ರೀಧರ ಪೂಜಾರಿ, ನಿಶಾಂತ್, ಮಹೇಂದ್ರ ಕೋಟ್ಯಾನ್, ಸುನಿಲ್ ಅಂಬಲಪಾಡಿ, ಶ್ರೀನಿವಾಸ್ ಕಪ್ಪೆಟ್ಟು, ಸತೀಶ್, ದಯಾಶಿನಿ, ಕುಸುಮ ಮತ್ತು ಮೇಘ ಹಾಗೂ ಆರೋಗ್ಯ ಕಾರ್ಯಕರ್ತೆಯರಾದ ಪ್ರವೀಣ ಮತ್ತು ವಿಶಾಲ ನಾಯ್ಕ್, ಆಶಾ ಕಾರ್ಯಕರ್ತೆಯರಾದ ಸರಸ್ವತಿ ಕೆ. ಶ್ರೀಯಾನ್, ಗಾಯತ್ರಿ ಮತ್ತು ನಿಶಾ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!