Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ದೇವಳ ಜೀರ್ಣೋದ್ಧಾರ ಪವಿತ್ರ ಕಾರ್ಯ

ದೇವಳ ಜೀರ್ಣೋದ್ಧಾರ ಪವಿತ್ರ ಕಾರ್ಯ

ಉಡುಪಿ: ಹೊಸತಾಗಿ ದೇವಳ ನಿರ್ಮಾಣಮಾಡುವುದಕ್ಕಿಂತ ಜೀರ್ಣಾವಸ್ಥೆಯಲ್ಲಿರುವ ಪ್ರಾಚೀನ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವುದು ಶ್ರೇಷ್ಠತಮ ಪುಣ್ಯಕಾರ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಉತ್ಥಾನ ದ್ವಾದಶಿ ಶುಕ್ರವಾರ ನಡೆದ ಶಿಲಾಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂತ್ರಸಿದ್ಧರು, ತಪಸ್ವಿಗಳು ಪ್ರತಿಷ್ಠಾಪಿಸಿದ ಅಥವಾ ಪೂಜಿಸಿದ ದೇವಸ್ಥಾನಗಳ ಸನ್ನಿಧಾನಗಳನ್ನು ವರ್ಣಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮಹತ್ವವೂ ಅಗಾಧ. ಎಲ್ಲರ ಕುಲಸ್ವಾಮಿಯಾದ ಉಡುಪಿ ಶ್ರೀ ಅನಂತೇಶ್ವರ ದೇವರೇ ಎಂಟುನೂರು ವರ್ಷಗಳ ಹಿಂದೆ ಮಾಧವ ಕುಂಜಿತ್ತಾಯರಿಗೆ ಅನುಗ್ರಹಪೂರ್ವಕವಾಗಿ ನೀಡಿದ ಪ್ರತಿಮೆ ಇದು. ಇಂಥ ಭವ್ಯ ಇತಿಹಾಸವಿರುವ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಮಗೆಲ್ಲರಿಗೂ ಒದಗಿರುವ ಸುಯೋಗ. ಉತ್ಥಾನ ದ್ವಾದಶಿ ಪರ್ವಕಾಲದಲ್ಲಿ ನಡೆಯುತ್ತಿರುವ ಶಿಲಾಮುಹೂರ್ತ ಕಾರ್ಯಕ್ರಮದಿಂದ ಎಲ್ಲರ ಜೀವನದಲ್ಲಿಯೂ ಅಭ್ಯುದಯವಾಗಲಿ ಎಂದು ಹಾರೈಸಿದರು.
ದೇವಸ್ಥಾನದ ಹಯವದನ ತಂತ್ರಿ, ವಿದ್ವಾಂಸ ಗೋಪಾಲಕೃಷ್ಣ ಜೋಯಿಸ್, ಬಿ. ಗೋಪಾಲಾಚಾರ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಕುಂಜಿಬೆಟ್ಟು ವಾರ್ಡ್ ನಗರಸಭಾ ಸದಸ್ಯ ಗಿರೀಶ್ ಅಂಚನ್ ಮತ್ತು ಸಂಗೀತಗಾರ ಮೈಸೂರು ರಾಮಚಂದ್ರಾಚಾರ್ಯ, ಸಂತೋಷ ಪಿ. ಶೆಟ್ಟಿ ತೆಂಕಗುತ್ತು, ಶಿಲಾಮಯ ಕೆಲಸದ ಉಸ್ತುವಾರಿ ವಹಿಸಿಕೊಂಡಿರುವ ಶಿಲ್ಪಿ ಕಾರ್ಕಳ ರಾಜು ಎಚ್. ನಾಯಕ್ ಇದ್ದರು.
ಮಹಿತೋಷ ಆಚಾರ್ಯ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!