ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ಗೀತಾ ದೀಕ್ಷೆ ಪಡೆದ ಮಾಜಿ ಪ್ರಧಾನಿ
ಬೆಂಗಳೂರು: ಭಾವಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಹತ್ವಾಕಾಂಕ್ಷಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಮಾಜಿ ಪ್ರಧಾನಿ ಎಚ್. ಡು. ದೇವೇಗೌಡ ಭಾಗಿಯಾದರು.
90ರ ಇಳಿ ಹರೆಯದಲ್ಲೂ ಕೋಟಿ ಗೀತಾ ಲೇಖನ ದೀಕ್ಷೆ ಪಡೆದರು.
ಪುತ್ತಿಗೆ ಶ್ರೀಪಾದರ ಯೋಜನೆಗೆ ಕೈಜೋಡಿಸಿರುವ ದೇವೇಗೌಡ ಅವರು ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ ಅವರಿಂದ ಪುಸ್ತಕ ಸ್ವೀಕರಿಸಿದರು.