ನವದೆಹಲಿ: ವೈದ್ಯರು ಪುನರ್ಜನ್ಮ ನೀಡುವ ದೇವರು ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ವೈದ್ಯರನ್ನುದ್ದೇಶಿಸಿ ಮಾತನಾಡಿದರು.
ವೈದ್ಯರನ್ನು ನಾವು ದೇವರೆಂದೇ ಪರಿಗಣಿಸಿದ್ದೇವೆ. ಕೊರೊನಾ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವಲ್ಲಿ ವೈದ್ಯರ ಕೊಡುಗೆ ದೊಡ್ಡದು. ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ಜನರ ಜೀವ ಉಳಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ಸೋಂಕಿತರ ಚಿಕಿತ್ಸೆಗಾಗಿ ಶ್ರಮಿಸಿದ, ಸೋಂಕಿನಿಂದ ಮೃತಪಟ್ಟ ವೈದ್ಯರಿಗೆ ಇದೇ ಸಂದರ್ಭ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಜ್ಞಾನಿಗಳ ಜೊತೆಗೂಡಿ ವೈದ್ಯರೂ ಹೋರಾಡಿದ್ದಾರೆ ಎಂದು ಮೋದಿ ಸ್ಮರಿಸಿದರು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ 50 ಸಾವಿರ ಕೋ. ರೂ. ಅನುದಾನ ಮೀಸಲಿಡಲಾಗಿದೆ. ಈ ಬಾರಿ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದುಪ್ಪಟ್ಟು ಅನುದಾನ ನೀಡಲಾಗಿದೆ. ದೇಶದಲ್ಲಿ 7 ವರ್ಷದಲ್ಲಿ 15 ಹೊಸ ಏಮ್ಸ್ ಸ್ಥಾಪಿಸಲಾಗಿದೆ. ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಹೊಸ ಕಾನೂನು ಜಾರಿ ಮಾಡಲಾಗಿದೆ. ವಾರಿಯರ್ಸ್ ಗೆ ವಿಮೆಯ ಸುರಕ್ಷೆ ಒದಗಿಸಲಾಗಿದೆ ಎಂದರು.