Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಕ.ಸಾ.ಪ.ದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಕ.ಸಾ.ಪ.ದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 1

ಕ.ಸಾ.ಪ.ದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕ ನೇತೃತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಕಾರದೊಂದಿಗೆ ವೈದ್ಯರ ದಿನಾಚರಣೆ ಪ್ರಯುಕ್ತ ನಗರದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ಜಿಲ್ಲೆಯ 10 ಮಂದಿ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಜಿಲ್ಲೆಯ ಪ್ರಸಿದ್ಧ ವೈದ್ಯ ದಂಪತಿಗಳಾದ ಉಡುಪಿಯ ಡಾ. ಕ್ಯಾ| ಹೇಮಚಂದ್ರ ಹೊಳ್ಳ ಮತ್ತು ಡಾ. ಸುಲೋಚನ ಹೊಳ್ಳ, ಮಣಿಪಾಲ ಕೆ.ಎಂ.ಸಿ ನಿವೃತ್ತ ಮೂಳೆತಜ್ಞ ಡಾ. ಭಾಸ್ಕರಾನಂದ ಕುಮಾರ್ ಮತ್ತು ಡಾ. ನಳಿನಿ ಭಾಸ್ಕರಾನಂದ ಕುಮಾರ್, ಹಿರಿಯಡ್ಕ ಕಾಮತ್ ಆಸ್ಪತ್ರೆಯ ಡಾ. ದೇವದಾಸ್ ಕಾಮತ್ ಮತ್ತು ಡಾ. ಸುಧಾ ಡಿ. ಕಾಮತ್, ದೊಡ್ಡಣಗುಡ್ಡೆ ಡಾ. ಎ. ವಿ ಬಾಳಿಗಾ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಮತ್ತು ಡಾ. ಸುಲತಾ ಭಂಡಾರಿ, ಕಾರ್ಕಳ ಬೈಲೂರು ಗುರುಕೃಪಾ ನರ್ಸಿಂಗ್ ಹೋಮ್ ನ ಡಾ. ರಾಮಕೃಷ್ಣ ನಾಯಕ್ ಮತ್ತು ಡಾ. ಗೀತಾ ನಾಯಕ್, ಕೋಟೇಶ್ವರ ಎನ್. ಆರ್. ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ಡಾ. ಭಾಸ್ಕರ ಆಚಾರ್ಯ ಮತ್ತು ಡಾ. ಸಬಿತಾ ಆಚಾರ್ಯ, ಕುಂದಾಪುರ ಸರ್ಜನ್ ಆಸ್ಪತ್ರೆಯ ಡಾ. ಎಚ್. ವಿಶ್ವೇಶ್ವರ ಮತ್ತು ಡಾ. ವನಿತಾಲಕ್ಷ್ಮಿ, ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ಡಾ. ರಾಮಚಂದ್ರ ಐತಾಳ್ ಮತ್ತು ಡಾ. ಭಾರ್ಗವಿ ಐತಾಳ, ಕುಂದಾಪುರ ಆದರ್ಶ ಆಸ್ಪತ್ರೆಯ ಡಾ. ಆದರ್ಶ ಹೆಬ್ಬಾರ್ ಮತ್ತು ಡಾ. ಮಧು ಮಯೂರಿ, ಉಡುಪಿ ಸುನಾಗ್ ಆಸ್ಪತ್ರೆಯ ಡಾ. ನರೇಂದ್ರಕುಮಾರ್ ಎಚ್. ಎಸ್. ಮತ್ತು ಡಾ. ವೀಣಾ ನರೇಂದ್ರ ಕುಮಾರ್ ಅವರನ್ನು ಪ್ರಶಸ್ತಿಪತ್ರ, ಫಲಕದೊಂದಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಿದರು.

ಚಿನ್ನ, ವಜ್ರಕ್ಕೆ ಸಾಟಿಯಿಲ್ಲದ ಹೊಳಪು, ಬೆಳಕಿನಿಂದ ಸಮಾಜದಲ್ಲಿ ಕಂಗೊಳಿಸುವ ವೈದ್ಯರು ಜನರ ಆರೋಗ್ಯ, ಆರೈಕೆ ನಿಟ್ಟಿನಲ್ಲಿ ಜೀವ ಪಣಕ್ಕಿಟ್ಟು ನೀಡುವ ಸೇವೆ ಅನುಕರಣೀಯ ಎಂದರು.

ವೈದ್ಯರು ಕಲೆ ಸಾಹಿತ್ಯ ಸಾಂಸ್ಕೃತಿಕವಾಗಿಯೂ ತೊಡಗಿಕೊಂಡರೆ ಜನರ ನಾಡಿಮಿಡಿತ ಅರಿಯಲು ಸಾಧ್ಯ. ಸಮಾಜದಲ್ಲಿ ಉತ್ತಮ ಸಏವೆ ಮಾಡುವವರನ್ನು ಸಂಘಸಂಸ್ಥೆಗಳು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನಿತರ ಪರವಾಗಿ ಡಾ. ಭಾಸ್ಕರಾನಂದಕುಮಾರ್ ಮತ್ತು ಡಾ. ಪಿ. ವಿ. ಭಂಡಾರಿ ಮಾತನಾಡಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊಫೆಸರ್ ಶಂಕರ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮುಖ್ಯಸ್ಥ ಹಫೀಜ್ ರೆಹಮಾನ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್. ಪಿ. ಕಸಾಪ ಉಡುಪಿ ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ., ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಮಧುಸೂದನ ಹೇರೂರು, ರಾಘವೇಂದ್ರ ನಾಯಕ್ ಇದ್ದರು.

ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!