Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ನನಗಿನ್ನು ಸನ್ಮಾನ ಕಾರ್ಯಕ್ರಮ ಏರ್ಪಡಿಸಬೇಡಿ: ಸಚಿವ ಸುನಿಲ್ ಮನವಿ

ನನಗಿನ್ನು ಸನ್ಮಾನ ಕಾರ್ಯಕ್ರಮ ಏರ್ಪಡಿಸಬೇಡಿ: ಸಚಿವ ಸುನಿಲ್ ಮನವಿ

ಅಭಿನಂದನೆ ಕಾರ್ಯಕ್ರಮಗಳಿಗೆ ಬ್ರೇಕ್!

(ಸುದ್ದಿಕಿರಣ ವರದಿ)
ಉಡುಪಿ: ನನಗೆ ಇನ್ನು ಯಾವುದೇ ರೀತಿಯ ಅಭಿನಂದನ ಸಮಾರಂಭ ಏರ್ಪಡಿಸಬೇಡಿ. ನಾನು ಅದರಲ್ಲಿ ಭಾಗವಹಿಸುವುದಿಲ್ಲ.

ಇದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಖಚಿತ ನುಡಿ.

ಶನಿವಾರ ಜಿ.ಪಂ. ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ನಿರ್ವಹಣೆ ಕುರಿತ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ‌ಹಿನ್ನೆಲೆಯಲ್ಲಿ ಕೊರೊನಾ ತಡೆಗೆ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರುವುದು ಅನಿವಾರ್ಯ.

ಈ ನಿಟ್ಟಿನಲ್ಲಿ ನನಗೆ ಇನ್ನು ಮುಂದೆ ಯಾವುದೇ ಅಭಿನಂದನೆ ಅಥವಾ ಸನ್ಮಾನ ಸಮಾರಂಭ ಏರ್ಪಡಿಸಬೇಡಿ ಎಂದು ಪಕ್ಷ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ವಿನಂತಿಸಿದರು.

ಆರಾಧನಾ ಕೇಂದ್ರಗಳು ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲೂ ಕೋವಿಡ್ ಮಾರ್ಗಸೂಚಿ ಪಾಲನೆ ಅನಿವಾರ್ಯ ಎಂದು ಸಚಿವ ಸುನಿಲ್ ಪ್ರತಿಪಾದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!