Wednesday, July 6, 2022
Home ಸಮಾಚಾರ ರಾಜ್ಯ ವಾರ್ತೆ ಎಸ್.ಡಿ.ಎಂ. ಆಯುರ್ವೇದ ಕಾಲೇಜು ನೂತನ ಪ್ರಾಂಶುಪಾಲೆಯಾಗಿ ಡಾ. ಮಮತಾ

ಎಸ್.ಡಿ.ಎಂ. ಆಯುರ್ವೇದ ಕಾಲೇಜು ನೂತನ ಪ್ರಾಂಶುಪಾಲೆಯಾಗಿ ಡಾ. ಮಮತಾ

ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ) ಆಯುರ್ವೇದ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರಸೂತಿ ತಂತ್ರ ಮತ್ತು ಸ್ತ್ರೀ ಸಂಬಂಧಿ ರೋಗ ವಿಭಾಗ ಮುಖ್ಯಸ್ಥೆ ಡಾ. ಮಮತಾ ಕೆ. ವಿ. ನೇಮಕಗೊಂಡಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಈ ಆಯ್ಕೆ ಮಾಡಿದ್ದು, ಶಿಕ್ಷಣ ಸಂಸ್ಥೆಯ ಎಕ್ಸಿಕ್ಯೂಟಿವ್ ಆಫೀಸರ್ ಶಶಿಧರ ಶೆಟ್ಟಿ ಅಧಿಕಾರ ವಹಿಸಿಕೊಟ್ಟರು.

ಡಾ. ಮಮತಾ, ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿ.ಎ.ಎಮ್.ಎಸ್. ಪದವಿ ಪಡೆದು, ಚಿನ್ನದ ಪದಕ ಗಳಿಸಿದ್ದರು. ಸ್ನಾತಕೋತ್ತರ ಪದವಿಯನ್ನು ಪ್ರಸೂತಿತಂತ್ರ ಮತ್ತು ಸ್ತ್ರೀ ಸಂಬಂಧಿ ರೋಗ ವಿಭಾಗದಲ್ಲಿ ವಾರಣಾಸಿಯ ಬನಾರಸ್ ಹಿಂದೂ ಯೂನಿವರ್ಸಿಟಿ ಹಾಗೂ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಆಯುರ್ವೇದ ಜೈಪುರದಲ್ಲಿ ಪಿ.ಎಚ್.ಡಿ ಪದವಿ ಪಡೆದರು.

ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಆಯುರ್ವೇದ ಸಮ್ಮೇಳನ ಆಯೋಜನೆ, ಪ್ರಬಂಧ ಮಂಡನೆ ಮಾಡಿದ್ದು, ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ.

ಅವರು ಮಣಿಪಾಲ ಮಾಹೆ ಸಹಾಯಕ ನಿರ್ದೇಶಕ (ಖರೀದಿ ವಿಭಾಗ) ನವೀನ್ ಕುಮಾರ್ ಪತ್ನಿ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!