Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಯಕ್ಷಗಾನ ಮಂಡಳಿ ಕಟ್ಟಡಕ್ಕೆ ಧರ್ಮಸ್ಥಳದಿಂದ ದೇಣಿಗೆ

ಯಕ್ಷಗಾನ ಮಂಡಳಿ ಕಟ್ಟಡಕ್ಕೆ ಧರ್ಮಸ್ಥಳದಿಂದ ದೇಣಿಗೆ

ಉಡುಪಿ: ಕಳೆದ ಸುಮಾರು 63 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ ನಿರ್ಮಿಸುತ್ತಿರುವ ನೂತನ ರಂಗಮಂದಿರಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಬಿ. ಗಣೇಶ್ ಅವರು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಅವರಿಗೆ ಈಚೆಗೆ 5 ಲಕ್ಷ ರೂ.ಗಳ ಡಿ.ಡಿ. ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಅಂಬಲಪಾಡಿ ಒಕ್ಕೂಟ ಅಧ್ಯಕ್ಷ ಪ್ರಕಾಶ್ ಆಚಾರ್, ಮೇಲ್ವಿಚಾರಕ ಜಯಕರ್, ಸಹಾಯಕಿ ಗೀತಾ ಪಾಲನ್, ಪಂಚಾಯತ್ ಸದಸ್ಯ ಹರೀಶ ಪಾಲನ್, ಯುವಕ ಮಂಡಲ ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ನಾರಾಯಣ ಎಂ. ಹೆಗಡೆ, ಕೆ. ಜೆ. ಗಣೇಶ, ಕೆ. ಅಜಿತ್ ಕುಮಾರ್, ನಟರಾಜ ಉಪಾಧ್ಯ, ಪ್ರವೀಣ ಉಪಾಧ್ಯ, ಜಯ ಕೆ., ಪ್ರಣೀತ್ ಇದ್ದರು.

ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ, ಕಾರ್ಯದರ್ಶಿ ಕೆ. ಜೆ. ಕೃಷ್ಣ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!