ಉಡುಪಿ: ಮೂಲತಃ ಬಾಳ್ಕುದ್ರು ಗ್ರಾಮದವರಾದ ಬೆಳಗಾವಿ ನಿವಾಸಿ, ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲ ಹಾಗೂ ಬಂಟರ ಸಂಘದ ಮಾಜಿ ಉಪಾಧ್ಯಕ್ಷ, ಅಲಾಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಸಂಸ್ಥಾಪಕ ಗವರ್ನರ್ ದಿನಕರ ಶೆಟ್ಟಿ ಅವರು ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶ್ರೀದೇವಳದ ರಥೋತ್ಸವ ಹಾಗೂ ದೀಪೋತ್ಸವ ಸಂದರ್ಭದಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ದೇವಸ್ಥಾನದ ಕ್ಷೇತ್ರಾಧಿಕಾರಿ ಎಚ್. ಧನಂಜಯ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಉದ್ಯಮಿ ವಿಜಯ ಹೆಗ್ಡೆ ಹಾಗೂ ಬೆಳಗಾವಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಮಂದರ್ತಿ ಉದಯ ಕುಮಾರ ಶೆಟ್ಟಿ ಮೊದಲಾದವರಿದ್ದರು.
ಈ ವ್ಯವಸ್ಥೆಯಿಂದಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.
ಈ ಮೊದಲು ದಿನಕರ ಶೆಟ್ಟಿ 100 ಲೀ. ಸಾಮರ್ಥ್ಯದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ