Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಧರ್ಮ ರಕ್ಷಣೆಗೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು

ಧರ್ಮ ರಕ್ಷಣೆಗೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು

ಧರ್ಮ ರಕ್ಷಣೆಗೆ ಹಿಂದೂ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು
(ಸುದ್ದಿಕಿರಣ ವರದಿ)

ಉಡುಪಿ: ದೇಶದಲ್ಲಿ ರಾಷ್ಟ್ರೀಯ ವಾದ ಬೆಳಗುತ್ತಿದೆ; ಜಾತ್ಯತೀತ ವಾದ, ಸಮಾಜ ವಾದ ಸಮಾಧಿಯಾಗಿದೆ. ಜನ ಬೆಂಬಲ ಕಳೆದುಕೊಂಡು ಹತಾಶರಾಗಿರುವವರು ರೈತರ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರ ನಡೆಯುತ್ತಿದ್ದಾರೆ. ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕು. ಧರ್ಮ ರಕ್ಷಣೆಗೆ ಮೈಕೊಡವಿ ಎದ್ದು ನಿಲ್ಲಬೇಕು ಎಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಕರೆ ನೀಡಿದರು.

ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ವಿಜಯ ದಶಮಿ ಶುಕ್ರವಾರದಂದು ಅಂಬಲಪಾಡಿಯಲ್ಲಿ ನಡೆದ ಬೃಹತ್ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಶಿಖರೋಪನ್ಯಾಸ ನೀಡಿದರು.

ತಡೆ ಗೋಡೆಯಾಗಬೇಕು
ದೆಹಲಿಯಲ್ಲಿ ಗಣರಾಜ್ಯ ದಿನ ನಡೆದ ಗಲಭೆ, ಷಡ್ಯಂತ್ರದ ಭಾಗವಾಗಿದೆ. ಸೋಲು ಒಪ್ಪಿಕೊಳ್ಳುವ ಮನಃಸ್ಥಿತಿ ಇಲ್ಲದ ದೇಶದ ಒಳಗಿನ ಮತ್ತು ಹೊರಗಿನ ಶತ್ರುಗಳು ಇಸ್ಲಾಮಿಕ್ ಮತೀಯ ವಾದಿ ಶಕ್ತಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶತ್ರುಗಳ ಗುರಿ ಭಾರತವಾಗಿದೆ. ಜಾಗೃತ ಹಿಂದೂ ಸಮಾಜ ಅದಕ್ಕೆ ತಡೆಗೋಡೆಯಾಗಿ ನಿಲ್ಲಬೇಕು ಎಂದರು.

ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಭಾರತವನ್ನು ಇಸ್ಲಾಮೀಕರಣಗೊಳಿಸಲು ಸಂಚು ನಡೆಸುತ್ತಿವೆ. ಮುಸ್ಲಿಮರ ಜನಸಂಖ್ಯೆ ಶೇ. 20ಕ್ಕಿಂತ ಹೆಚ್ಚು ಇರುವ ಕಡೆಗಳಲ್ಲಿ ಹಿಂದೂ ಸಮಾಜದ ಮೇಲೆ ದಾಳಿ ಆರಂಭವಾಗುತ್ತದೆ. ಮತಾಂಧತೆಯ ಹುಚ್ಚಾಟಕ್ಕೆ ಭಾರತದಲ್ಲಿ ಅವಕಾಶ ನೀಡಬಾರದು ಎಂದರು.

ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಧ್ಯಕ್ಷತೆ ವಹಿಸಿದ್ದರು.

ಹಿಂಜಾವೇ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ, ರಾಜ್ಯ ಪ್ರಚಾರ ಪ್ರಮುಖ್ ಅರವಿಂದ ಕೋಟೇಶ್ವರ, ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಬೈಲೂರು, ಪ್ರಾಂತ ಉಪಾಧ್ಯಕ್ಷ ಕಿಶೋರ್ ಮಂಗಳೂರು, ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಚಿನ್ಮಯ್ ಈಶ್ವರಮಂಗಲ, ಪ್ರಕಾಶ್ ಕುಕ್ಕೆಹಳ್ಳಿ ಮೊದಲಾದವರಿದ್ದರು.

ಬೃಹತ್ ಮೆರವಣಿಗೆ
ಅದಕ್ಕೂ ಮುನ್ನ ಕಡಿಯಾಳಿ ಮಹಿಷಮರ್ದಿನೀ ದೇವಳದಿಂದ ತೊಡಗಿ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ವರೆಗೆ ಬೃಹತ್ ಮೆರವಣಿಗೆ ನಡೆಯಿತು.

ಸಾವಿರಕ್ಕೂ ಅಧಿ ಮಂದಿ ಹಿಂದೂ ಕಾರ್ಯಕರ್ತರು ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್, ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಭಾಗವಹಿಸಿದ್ದರು.

ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಲವಾರು ಪ್ರದರ್ಶನ
ವಿಜಯ ದಶಮಿ ಹಿನ್ನೆಲೆಯಲ್ಲಿ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಕಾರ್ಯಕರ್ತರು ತಲವಾರುಗಳನ್ನು ಪ್ರದರ್ಶಿಸಿದರು. ಹತ್ತಕ್ಕೂ ಹೆಚ್ಚು ಕಾರ್ಯಕ್ಯರ್ತರಿಂದ ಆಯುಧ ಪ್ರದರ್ಶನ ನಡೆಯಿತು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!