Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಕರ್ವಾಲು ತ್ಯಾಜ್ಯ ಸಂಗ್ರಹ ಘಟಕಕ್ಕೆ ತಜ್ಞರ ಭೇಟಿ

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಕರ್ವಾಲು ತ್ಯಾಜ್ಯ ಸಂಗ್ರಹ ಘಟಕಕ್ಕೆ ತಜ್ಞರ ಭೇಟಿ

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಕರ್ವಾಲು ತ್ಯಾಜ್ಯ ಸಂಗ್ರಹ ಘಟಕಕ್ಕೆ ತಜ್ಞರ ಭೇಟಿ
(ಸುದ್ದಿಕಿರಣ ವರದಿ)

ಉಡುಪಿ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದ ಸೂಚನೆಯಂತೆ ನೀಲಾವರ ಗೋಶಾಲೆಗೆ ಭೇಟಿ ನೀಡಲು ಬಂದಿದ್ದ ತಜ್ಞರು ಬುಧವಾರ ಉಡುಪಿ ನಗರಸಭೆಗೆ ಭೇಟಿ ನೀಡಿದರು.

ತಜ್ಞರಾದ ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪಸೂರ್ ಶಾಸಕ ಕೆ. ರಘುಪತಿ ಭಟ್, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಮತ್ತು ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಪೌರಾಯುಕ್ತ ಡಾ| ಉದಯ ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಇದ್ದರು.

ಉಡುಪಿ ನಗರದಲ್ಲಿ ನಿತ್ಯ ಲಭಿಸುವ ಜೈವಿಕ ತ್ಯಾಜ್ಯ ಬಳಸಿ ವಿದ್ಯುತ್ ತಯಾರಿ ಸಾಧ್ಯವಿದ್ದು ಕೇಂದ್ರ ಸರ್ಕಾರವೂ ಅದಕ್ಕೆ ವಿಶೇಷ ಉತ್ತೇಜನ ನೀಡಲಿದೆ ಎಂದರು.

3 ಸಾವಿರ ಯುನಿಟ್ ವಿದ್ಯುತ್
ಶಾಸಕ ಭಟ್ ಸೂಚನೆಯಂತೆ ಅಲೆವೂರು ಕರ್ವಾಲಿನ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಭೇಟಿ ನೀಡಿ, ಅಲ್ಲಿನ ಸಿಬಂದಿಗಳ ಮೂಲಕ ಸ್ಥೂಲ ಮಾಹಿತಿ ಪಡೆದರು.

ಅಲ್ಲಿ ದಿನವಹಿ ಅಂದಾಜು 50 ಟನ್ ಜೈವಿಕ ತ್ಯಾಜ್ಯ ಲಭಿಸುವ ಬಗ್ಗೆ ಮಾಹಿತಿ ಲಭಿಸಿದ್ದು. ಅದರಂತೆ ಪ್ರತೀ ದಿನ ಸುಮಾರು 3 ಸಾವಿರ ಯುನಿಟ್ ಉತ್ಪಾದನೆ ಸಾಧ್ಯವಿದೆ. ಈ ಕುರಿತು ಯೋಜನಾ ವರದಿ ಸಿದ್ಧಪಡಿಸಿ ಕಳಿಸುವುದಾಗಿ ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪಸೂರ್ ತಿಳಿಸಿದರು.

ಕೇಂದ್ರದ ಸಹಯೋಗ ಪಡೆದು ಜೈವಿಕ ವಿದ್ಯುತ್ ಸ್ಥಾವರ ಸ್ಥಾಪಿಸಿದಲ್ಲಿ ಉಡುಪಿ ಜನತೆಗೆ ಬಹಳ ಉಪಯೋಗವಾಗಲಿದೆ ಎಂದವರು ತಿಳಿಸಿದರು.

ನಗರಸಭಾ ಸಿಬಂದಿ ಸುರೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಇದ್ದರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!