ಸುದ್ದಿಕಿರಣ ವರದಿ
ಶನಿವಾರ, ಜುಲೈ 30
ಉಡುಪಿ ಪಿಎಫ್ ಕಚೇರಿ ಶಿಲಾನ್ಯಾಸ
ಉಡುಪಿ: ಮಣಿಪಾಲದಲ್ಲಿ ಸುಮಾರು 7 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ನೌಕರರ ಭವಿಷ್ಯ ನಿಧಿ (ಇಪಿಎಫ್) ಪ್ರಾದೇಶಿಕ ಕಚೇರಿ ನೂತನ ಕಟ್ಟಡದ ಶಿಲಾನ್ಯಾಸವನ್ನು ಶನಿವಾರ ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ವರ್ಚ್ಯುವಲ್ ಆಗಿ ಉದ್ಘಾಟಿಸಿದ್ದು, ಮಣಿಪಾಲದಲ್ಲಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಭಟ್ ಜಿಲ್ಲೆಯಲ್ಲಿ ಬೀಡಿ, ಗೋಡಂಬಿ ಇತ್ಯಾದಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಅನೇಕ ಮಂದಿ ಕಾರ್ಮಿಕರಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ನೌಕರರಿಗೆ ಭವಿಷ್ಯ ನಿಧಿ ಅತ್ಯಂತ ಅಗತ್ಯವಾಗಿದ್ದು, ಉಡುಪಿ ನೂತನ ಜಿಲ್ಲೆಯಾಗಿ ರಜತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭವಿಷ್ಯ ನಿಧಿ ಇಲಾಖೆ ಸ್ವಂತ ಕಟ್ಟಡ ಹೊಂದುತ್ತಿರುವುದು ಸಂತಸದಾಯಕ ಎಂದರು.
ಜಿಲ್ಲೆಗೆ ಇಎಸ್.ಐ ಆಸ್ಪತ್ರೆ ಮಂಜೂರಾಗಿರುವುದನ್ನೂ ಶಾಸಕ ಭಟ್ ಸ್ಮರಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಹೆಚ್ಚುವರಿ ಕಮೀಷನರ್ ಮಾರುತಿ ಭೋಯಿ, ಪ್ರಾದೇಶಿಕ ಕಮೀಷನರ್ ಗಳಾದ ಡಾ. ಅಜಯ್ ಸಿಂಗ್ ಚೌಧರಿ (ಉಡುಪಿ) ಮತ್ತು ಅಶ್ವಿನ್ ಕುಮಾರ್ ಗುಪ್ತಾ (ಗೋವಾ) ಇದ್ದರು.