Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ

(ಸುದ್ದಿಕಿರಣ ವರದಿ)
ಉಡುಪಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ, ಹಿರಿಯಡಕ ನಿವಾಸಿ ಮಲ್ಪೆ ರಾಘವೇಂದ್ರ ಅವರನ್ನು ಅವರ ನಿವಾಸದಲ್ಲಿ ಸೆ. 5ರಂದು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಸಮಾಜದ ಕಣ್ಣುಗಳಿದ್ದಂತೆ. ವಿದ್ಯಾರ್ಥಿಗಳು ಪ್ರಮಾಣಿಕತೆ, ನಿಷ್ಠೆ, ಪರೋಪಕಾರ ಗುಣಗಳನ್ನು ಬೆಳೆಸಬೇಕು. ಯಾರಿಂದಲೂ ಕಸಿಯಲಾಗದ ಸಂಪತ್ತು ಎಂದರೆ ವಿದ್ಯೆ. ಈ ನಿಟ್ಟಿನಲ್ಲಿ ಕಲಿಕೆ ಪ್ರವೃತ್ತಿ ನಿರಂತರವಾಗಿರಬೇಕು ಎಂದರು.

ನಿವೃತ್ತ ಶಿಕ್ಷಕಿ ರತ್ನ ಮಲ್ಪೆ ರಾಘವೇಂದ್ರ, ಹಿರಿಯಡಕ ಬಿಲ್ಲವ ಸಂಘ ಕಾರ್ಯದರ್ಶಿ ರವೀಂದ್ರ ಪೂಜಾರಿ, ಮಣಿಪಾಲ ಮಾಹೆ ಅಧಿಕಾರಿ ನಾಗರಾಜೇಂದ್ರ ಎಂ. ಆರ್. ,ನಳಿನಾ ಪ್ರಮೋದ್, ಯುವ ಲೇಖಕ ರಾಘವೇಂದ್ರ ಪ್ರಭು ಕರ್ವಾಲು, ಸೌಮ್ಯ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!