ಉಡುಪಿ: ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ರಥಬೀದಿ ನಿರ್ಮಾಣ ಪ್ರಗತಿಯಲ್ಲಿದ್ದು, ದೇವಸ್ಥಾನದ ಮುಂಭಾಗದಲ್ಲಿ ಭಕ್ತಾದಿಗಳ ಸಹಕಾರದಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಜಗೋಪುರಕ್ಕೆ ದೇವಸ್ಥಾನದ ಆಡಳಿತೆದಾರರಾದ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶಂಕುಸ್ಥಾಪನೆ ನೆರವೇರಿಸಿದರು.
ದೇವಸ್ಥಾನದ ತಂತ್ರಿ ಉದಯ ತಂತ್ರಿ ಧಾರ್ಮಿಕ ವಿಧಿ ನಡೆಸಿದರು.
ಅರ್ಚಕರಾದ ಗೋಪಾಲಕೃಷ್ಣ ಭಟ್ ಮತ್ತು ರಾಘವೇಂದ್ರ ಭಟ್, ಪರಶುರಾಮ ದೇವಸ್ಥಾನದ ಅರ್ಚಕ ವಿನಯ ಪ್ರಸಾದ್ ಭಟ್, ಕುರ್ಕಾಲು ಗ್ರಾ. ಪಂ. ಅಧ್ಯಕ್ಷ ಮಹೇಶ ಶೆಟ್ಟಿ, ಕುರ್ಕಾಲು ಪಟ್ಟ ಚಾವಡಿಯ ಸುಂದರ ಶೆಟ್ಟಿ, ದೇವಸ್ಥಾನದ ಪ್ರಬಂಧಕ ರಾಜೇಂದ್ರ ರಾವ್, ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಕುರ್ಕಾಲು ದಿನೇಶ ಶೆಟ್ಟಿ, ಪಂಚಾಯತ್ ಸದಸ್ಯರಾದ ಸುದರ್ಶನ ರಾವ್ ಮತ್ತು ಪರಶುರಾಮ ಭಟ್ ಮೊದಲಾದವರಿದ್ದರು