Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ವಾರ್ತಾ ಇಲಾಖೆ ಆಯುಕ್ತರಾಗಿ ಜಿ. ಜಗದೀಶ್ ನೇಮಕ

ವಾರ್ತಾ ಇಲಾಖೆ ಆಯುಕ್ತರಾಗಿ ಜಿ. ಜಗದೀಶ್ ನೇಮಕ

ವಾರ್ತಾ ಇಲಾಖೆ ಆಯುಕ್ತರಾಗಿ ಜಿ. ಜಗದೀಶ್ ನೇಮಕ
(ಸುದ್ದಿಕಿರಣ ವರದಿ)

ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಜಿ. ಜಗದೀಶ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇಮಿಸಿದ್ದಾರೆ.

ಜಿ. ಜಗದೀಶ್ ಅವರು ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಉತ್ತಮ ಆಡಳಿತಗಾರನಾಗಿರುವ ಅವರು, ಉಡುಪಿಯಲ್ಲಿ ಕೋವಿಡ್ ನಿರ್ವಹಣೆ, ಮರಳು ಸಮಸ್ಯೆ ಇತ್ಯಾದಿಗಳನ್ನು ಉತ್ತಮವಾಗಿ ನಿಭಾಯಿಸಿ, ಜನಮನ್ನಣೆ ಗಳಿಸಿದ್ದರು.

ಈಚೆಗಷ್ಟೇ ವರ್ಗವಾಗಿದ್ದ ಅವರು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿಯಾಗಿದ್ದರು.

ಪ್ರಸ್ತುತ ಆಯುಕ್ತರಾಗಿರುವ ಡಾ. ಪಿ. ಎಸ್. ಹರ್ಷ ತರಬೇತಿಗಾಗಿ ತೆರಳಿರುವ ಹಿನ್ನೆಲೆಯಲ್ಲಿ ಜಿ. ಜಗದೀಶ್ ಅವರಿಗೆ ಹೆಚ್ಚುವರಿಯಾಗಿ ಆಯುಕ್ತರ ಹೊಣೆ ವಹಿಸಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!