ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15
ಜೀವನದ ಸಂಪನ್ನತೆಗೆ ಕಲೆ ಸಾಹಿತ್ಯ ಪೂರಕ
ಉಡುಪಿ: ಕಲೆ ಸಂಗೀತ ಸಾಹಿತ್ಯಗಳಲ್ಲಿ ತೊಡಗಿಸಿಕೊಂಡವರ ಜೀವನ ಸಂಪನ್ನತೆಯೊಂದಿಗೆ ಸಮತೋಲನದಲ್ಲಿರುತ್ತದೆ ಎಂದು ಎಂ.ಜಿ.ಎಂ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ಎಸ್. ನಾಯ್ಕ್ ಹೇಳಿದರು.
ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ವಿಭಾಗ, ಸಾಹಿತ್ಯ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಘಟಕ ಸಂಯುಕ್ತವಾಗಿ ಆಯೋಜಿಸಿದ ಗಮಕ ಗಾಯನ ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಪೂರ್ಣ ಶಿಕ್ಷಕನಾಗಬೇಕಾದರೆ ಪಠ್ಯೇತರ ವಿಷಯಗಳಲ್ಲೂ ಪರಿಣತಿ ಸಾಧಿಸಿರಬೇಕು. ವಿದ್ಯಾರ್ಥಿ ದೆಸೆಯಲ್ಲಿರುವವರು ಸಾಧಕ ಕಲಾವಿದರ ಕಲಾ ಪ್ರದರ್ಶನ ವೀಕ್ಷಿಸುವ ಮೂಲಕ ತಮ್ಮ ಆಸಕ್ತಿಯ ಹರಹುಗಳನ್ನು ವಿಸ್ತರಿಸಿಕೊಳ್ಳಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಅರುಣ್ ಕುಮಾರ್, ಕನ್ನಡ ವಿಭಾಗ ಮುಖ್ಯಸ್ಥ ಡಾ| ಪುತ್ತಿ ವಸಂತ ಕುಮಾರ್, ಸಂಸ್ಕೃತ ವಿಭಾಗ ಮುಖ್ಯಸ್ಥೆ ಡಾ| ವಸುಮತಿ ಭಟ್ ಇದ್ದರು.
ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.
ಬಳಿಕ ಕುಮಾರ ವ್ಯಾಸ ಭಾರತದ ಕರ್ಣ ಭೇದನ ಆಖ್ಯಾನದ ಗಮಕ ಗಾಯನವನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿನಿ ಕಾವ್ಯ ಹಂದೆ ನಿರ್ವಹಿಸಿದರು.
ವ್ಯಾಖ್ಯಾನಕಾರರಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಉಪನ್ಯಾಸಕ, ಕುಂದಾಪುರ ಗಮಕ ಕಲಾ ಪರಿಷತ್ ಅಧ್ಯಕ್ಷ ಸುಜಯೀಂದ್ರ ಹಂದೆ ಸಹಕರಿಸಿದರು.