Saturday, August 13, 2022
Home ಲೋಕಾಭಿರಾಮ ಆರೋಗ್ಯ ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8

ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ
ಮಣಿಪಾಲ: ರೇಡಿಯೊ ಥೆರಪಿ ಮತ್ತು ಆಂಕೊಲಾಜಿ ವಿಭಾಗ ಸಹಯೋಗದೊಂದಿಗೆ ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ಗೆ ಚಾಲನೆ ನೀಡಲಾಯಿತು.

ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್ ಮತ್ತು ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಸಂಯುಕ್ತವಾಗಿ ಉದ್ಘಾಟಿಸಿದರು.

ಹೊಸ ಸ್ಪೆಷಾಲಿಟಿ ಮತ್ತು ಸಬ್ ಸ್ಪೆಷಾಲಿಟಿ ಕ್ಲಿನಿಕ್ ಗಳ ಪ್ರಾಮುಖ್ಯತೆ ಕುರಿತು ಮಾತನಾಡಿದ ಡಾ. ಶರತ್ ಕೆ. ರಾವ್, ಮೊದಲಿನಿಂದಲೂ ಹೊಸ ಸೇವೆ ಪ್ರಾರಂಭಿಸಲು ಮತ್ತು ಒದಗಿಸುವಲ್ಲಿ ಕೆಎಂಸಿ ಮುಂಚೂಣಿಯಲ್ಲಿದೆ ಎಂದರು.

ಡಾ. ಆನಂದ್ ವೇಣುಗೋಪಾಲ್ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಮಣಿಪಾಲದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಬೆಳೆಸಿರುವುದು ಖುಷಿ ತಂದಿದೆ. ಈಗ ಅದರ ಸಮಗ್ರ ರೋಗಿಗಳ ಆರೈಕೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದರು.

ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರೇಡಿಯೊ ಥೆರಪಿ ಆಂಕೊಲಾಜಿ ವಿಭಾಗ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಕೃಷ್ಣ ಶರಣ್ ಹಾಗೂ ರೇಡಿಯೊ ಥೆರಪಿ ಆಂಕೊಲಾಜಿ ವಿಭಾಗ ಸಹ ಪ್ರಾಧ್ಯಾಪಕಿ ಡಾ. ಶೆರ್ಲಿ ಲೂಯಿಸ್ ಸಾಲಿನ್ಸ್ ಇದ್ದರು.

ಈ ವಿಶೇಷ ಚಿಕಿತ್ಸಾಲಯ ಡಾ. ಶೆರ್ಲಿ ಲೂಯಿಸ್ ಸಲಿನ್ಸ್ ನೇತೃತ್ವದಲ್ಲಿ ನಡೆಯಲಿದೆ. ಡಾ. ಶೆರ್ಲಿ ಲೂಯಿಸ್ ಅವರು ಟೊರೊಂಟೊದ ‘ಟೊರೊಂಟೊ ವಿಶ್ವವಿದ್ಯಾಲಯ’ದ ಪ್ರಿನ್ಸೆಸ್ ಮಾರ್ಗರೇಟ್ ಕ್ಯಾನ್ಸರ್ ಕೇಂದ್ರದಿಂದ ಗ್ಯಾಸ್ಟ್ರೊಇಂಟೆಸ್ಟಿನಲ್ ರೇಡಿಯೇಶನ್ ಆಂಕೊಲಾಜಿಯಲ್ಲಿ ಒಂದು ವರ್ಷ ಅವಧಿಯ ಕ್ಲಿನಿಕಲ್ ರಿಸರ್ಚ್ ಫೆಲೋಶಿಪ್ ಪಡೆದಿದ್ದಾರೆ.

ರಜಾದಿನ ಹೊರತು ಪಡಿಸಿ ಪ್ರತಿದಿನ ಸಮಾಲೋಚನೆಗೆ ಅವರು ಲಭ್ಯರಿರುತ್ತಾರೆ ಎಂದು ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.

ಡಾ. ಶೆರ್ಲಿ ಲೂಯಿಸ್ ಸಲಿನ್ಸ್ ಗ್ಯಾಸ್ಟ್ರೋಇಂಟೆಸ್ಟಿನಲ್ ರೇಡಿಯೇಷನ್ ಆಂಕೊಲಾಜಿ ಸ್ಪೆಷಾಲಿಟಿ ಕ್ಲಿನಿಕ್ ನ ಅವಲೋಕನ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!