Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಗೋಮಾಳ ಭೂಮಿ ಗೋಶಾಲೆಗೆ ನೀಡಲು ಸಮ್ಮತಿ

ಗೋಮಾಳ ಭೂಮಿ ಗೋಶಾಲೆಗೆ ನೀಡಲು ಸಮ್ಮತಿ

ಉಡುಪಿ: ರಾಜ್ಯದಲ್ಲಿರುವ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಯೊಂದಿಗೆ ನೀಡುವ ಬಗ್ಗೆ ಕಂದಾಯ ಮಂತ್ರಿ ಆರ್. ಅಶೋಕ್ ಸಮ್ಮತಿ ನೀಡಿದ್ದಾರೆ.

ಈ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಲ್ಲಿಸಿದ ಪತ್ರವನ್ನು ಸೋಮವಾರ ಉಡುಪಿಯಲ್ಲಿ ಸ್ವೀಕರಿಸಿ, ಮಾತನಾಡಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನಹರಿಸಬೇಕಾಗಿದೆ. ಗೋಮಾಳ ಭೂಮಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅತಿಕ್ರಮಣವಾಗಿವೆ. ಆದರೂ ಪ್ರಸ್ತುತ ಉಳಿದಿರುವ ಭೂಮಿಯನ್ನು ಗೋಶಾಲೆಗಳಿಗೆ ನೀಡುವುದರಿಂದ ಆ ಭೂಮಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಮತ್ತು ಗೋಶಾಲೆಗಳಿಗೆ ಬಲ ಬಂದಾಗುತ್ತದೆ ಎಂದು ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉಡುಪಿಯಲ್ಲಿ ಲಭ್ಯವಿರುವ ಗೋಮಾಳ ಭೂಮಿ ವಿವರ ಮತ್ತು ಜಿಲ್ಲೆಯ ಗೋಶಾಲೆಗಳ ವಿವರವನ್ನು ಶೀಘ್ರ ನೀಡುವಂತೆ ಸಚಿವ ಅಶೋಕ್ ಸೂಚಿಸಿದರು.

ಉಪಸ್ಥಿತರಿದ್ದ ಶಾಸಕ ಕೆ. ರಘುಪತಿ ಭಟ್, ಪೇಜಾವರ ಶ್ರೀಗಳು ಗೋರಕ್ಷಣೆ ಬಗ್ಗೆ ಮಾಡುತ್ತಿರುವ ವಿಶೇಷ ಕಾರ್ಯ ವಿವರಿಸಿದರು. ರಾಜ್ಯದೆಲ್ಲೆಡೆ ಗೋಶಾಲೆಗಳಿಗೆ ಬಲ ತುಂಬುವುದು ಶ್ರೀಗಳ ಕಾಳಜಿ ಎಂದರು.

ಶ್ರೀಗಳ ಪರವಾಗಿ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್. ವಿ. ಭಟ್ ಸಚಿವರನ್ನು ಗೌರವಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!