ಸುದ್ದಿಕಿರಣ ವರದಿ
ಸೋಮವಾರ, ಆಗಸ್ಟ್ 1
ಸರ್ಕಾರ ಬೇಧ ಭಾವ ಮಾಡುತ್ತಿಲ್ಲ
ಉಡುಪಿ: ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆ ಗಾಂಜಾ ವಿಷಯದಲ್ಲಿ ನಡೆದಿದ್ದು, ಆ ಪ್ರಕರಣ ವ್ಯಾವಹಾರಿಕ ಸಂಬಂಧದ ಕೊಲೆ ಎಂದು ಸುಳ್ಯ ಶಾಸಕ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆ ಘಟನೆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಕೇವಲ ಪ್ರವೀಣ ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂಬ ಟೀಕೆಯ ಹಿನ್ನೆಲೆಯಲ್ಲಿ ಮಾತನಾಡಿದರು.
ಸರ್ಕಾರ ಯಾವುದೇ ಬೇಧ ಭಾವ ಮಾಡುತ್ತಿಲ್ಲ ಎಂದು ಸಚಿವ ಅಂಗಾರ ಸ್ಪಷ್ಟಪಡಿಸಿದರು.
ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಗೆ ಸಂಬಂಧಿಸಿ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ. ಈಗಾಗಲೇ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ತನಿಖೆಗೆ ಪೂರಕವಾಗಿ ದ.ಕ. ಜಿಲ್ಲೆಯ ಕೇರಳ ಗಡಿಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.
ತನಿಖೆಯಿಂದ ನಿಜಾಂಶ ಹೊರಬೀಳುವ ವಿಶ್ವಾಸ ಇದೆ ಎಂದರು