Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಂಕಣಿ ಚಲನಚಿತ್ರ ಪೋಸ್ಟರ್ ಬಿಡುಗಡೆ

ಕೊಂಕಣಿ ಚಲನಚಿತ್ರ ಪೋಸ್ಟರ್ ಬಿಡುಗಡೆ

ಮಣಿಪಾಲ: ಇಲ್ಲಿನ ಆರ್.ಎಸ್.ಬಿ ಸಭಾಭವನದಲ್ಲಿ ಈಚೆಗೆ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಅಮ್ಚೆ ಕ್ರಿಯೇಶನ್ಸ್ ಮೂಲಕ ಸಂದೀಪ್ ಕಾಮತ್ ನಿರ್ದೇಶನದ ಆರ್.ಎಸ್.ಬಿ ಸಮಾಜದ ಕೊಂಕಣಿ ಭಾಷಿಕ ಪ್ರಥಮ ಚಲನಚಿತ್ರ ಅಮ್ಚೆ ಸಂಸಾರ್ ಟೈಟಲ್ ಪೋಸ್ಟರ್ ನ್ನು ತರಂಗ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಬಿಡುಗಡೆಗೊಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕಸ್ತೂರಿ ಮೋಹನ್ ಪೈ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ ್ಷಡಾ. ಕೆ. ಜಗದೀಶ ಪೈ, ಸಮ್ಮೇಳನ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಪ್ರಧಾನ ಸಂಚಾಲಕಿ ಪೂರ್ಣಿಮಾ ಸುರೇಶ್ ನಾಯಕ್, ಚಿತ್ರ ನಿರ್ದೇಶಕ ಸಂದೀಪ್ ಕಾಮತ್, ಸಿನೆಮಾ ಛಾಯಾಗ್ರಾಹಕ ಭುವನೇಶ್ ಪ್ರಭು ಹಿರೇಬೆಟ್ಟು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸುವರ್ಧನ ನಾಯಕ್, ಆರ್.ಎಸ್.ಬಿ ಮಹಿಳಾ ವೇದಿಕೆ ಅಧ್ಯಕ್ಷೆ ಮೋಹಿನಿ ಎನ್. ನಾಯಕ್, ಡಾ. ವಿದ್ಯಾಲತಾ, ಉದ್ಯಮಿ ಶ್ರೀಶ ನಾಯಕ್ ಪೆರ್ಣಂಕಿಲ, ಹಾಸ್ಯ ಸಾಹಿತಿ ಸಂಧ್ಯಾ ಶೆಣೈ, ರಾಘವೇಂದ್ರ ಪ್ರಭು ಕರ್ವಾಲು, ನಿತ್ಯಾನಂದ ನಾಯಕ್ ನರಸಿಂಗೆ, ವಿಶ್ವನಾಥ ನಾಯಕ್ ಬೆಳಂಜಾಲೆ, ವಿಜೇತ್ ಬೆಳ್ಳರ್ಪಾಡಿ, ಅಶೋಕ್ ನಾಯಕ್ ಕೊಡಂಗೆ ಮೊದಲಾದವರಿದ್ದರು.

ಬಿ. ಪುಂಡಲೀಕ ಮರಾಠೆ ಶಿರ್ವ ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!