Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗುಜ್ಜಾಡಿ ಪುನರಾಯ್ಕೆ

ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗುಜ್ಜಾಡಿ ಪುನರಾಯ್ಕೆ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗುಜ್ಜಾಡಿ ಪುನರಾಯ್ಕೆ
ಉಡುಪಿ: ಇಲ್ಲಿನ ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಪುನರಾಯ್ಕೆಗೊಂಡಿದ್ದಾರೆ.

ಈಚೆಗೆ ನಡೆದ 62ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ವಕೀಲ ಎಚ್. ಜಯಪ್ರಕಾಶ ಕೆದ್ಲಾಯ ಮತ್ತು ವರಿಷ್ಠ ಹಿಂದಿ ಪ್ರಚಾರಕ ಯು. ಎಸ್. ರಾಜಗೋಪಾಲ ಆಚಾರ್ಯ, ಕಾರ್ಯದರ್ಶಿಯಾಗಿ ವರಿಷ್ಠ ಹಿಂದಿ ಪ್ರಚಾರಕಿ ಯು. ಶಕುಂತಲಾ ಶೇಟ್, ಜೊತೆ ಕಾರ್ಯದರ್ಶಿಯಾಗಿ ತೆರಿಗೆ ಸಲಹೆಗಾರ ಧೀರೇಂದ್ರ ನಾವೆಲ್ಕರ್ ಮತ್ತು ಕೋಶಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಮುಕ್ತಾ ಶೆಣೈ ಚುನಾಯಿತರಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಲ್ತಾಫ್ ಅಹಮದ್, ಜಯವಂತ್ ಕಾಮತ್, ಮಧುಶೇಶ್ವರ ಪಿ. ಹೆಗ್ಡೆ, ರಘುಪತಿ ಪಿ. ಎಚ್. ಮತ್ತು ಜೇನ್ ಅಸುಂತಾ ಪಿರೇರ ಆಯ್ಕೆಯಾದರು.

ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಹಿಂದಿ ಮೈಸೂರು ಸಹಯೋಗದಲ್ಲಿ ಉಡುಪಿ ಪರಿಸರದ ಹಿಂದಿ ಪ್ರಚಾರಕರು ಮತ್ತು ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ, ಮಹಿಳೆಯರಿಗಾಗಿ ಹಿಂದಿ ಸಂಭಾಷಣಾ ಶಿಬಿರ, ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ, ಹಿಂದಿ ದಿನಾಚರಣೆ ಮತ್ತು ವಾರ್ಷಿಕೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!