Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಪುತ್ತಿಗೆ ಶ್ರೀಗಳಿಗೆ ಗುರುವಂದನೆ

ಪುತ್ತಿಗೆ ಶ್ರೀಗಳಿಗೆ ಗುರುವಂದನೆ

ತಿರುಪತಿ: ಗುರುಪೂರ್ಣಿಮೆ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಶನಿವಾರ ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು.

ತಿರುಪತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಪ್ರಮುಖರಾದ ಆನಂದತೀರ್ಥ ಆಚಾರ್ಯ ಪಗಡಾಲ್ ಶ್ರೀಗಳನ್ನು ಗೌರವಿಸಿದರು.

ಆಕಸ್ಮಿಕ ಸಂದರ್ಭ
ಕಳೆದ ಕೆಲವು ದಿನಗಳಷ್ಟೇ ಷಷ್ಠ್ಯಬ್ದಿ ಪೂರ್ತಿ ಶಾಂತಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಿ ವೈಕದಿಕ ವೃಂದವನ್ನು ಸಂತೋಷಗೊಳಿಸಿದ್ದ ಪುತ್ತಿಗೆ ಶೀಗಳಿಗೆ ಈ ಗೌರವ ಲಭಿಸಿದ್ದು ಆಕಸ್ಮಿಕ.

ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿರುಪತಿಗೆ ಶ್ರೀ ವೆಂಕಟೇಶ ದರ್ಶನಕ್ಕೆಂದು ಆಗಮಿಸಿದ್ದರು.

ದಾಸ ಸಾಹಿತ್ಯ ಪ್ರೊಜೆಕ್ಟ್ ವತಿಯಿಂದ ಗುರುಪೂರ್ಣಿಮೆ ದಿನದಂದು ದೇಶದ ವಿವಿಧ ಭಾಗಗಳಲ್ಲಿ ವೈಭವದಿಂದ ಗುರುವಂದನ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಆದರೆ, ಕೊರೊನಾ ನಿಮಿತ್ತ ಈ ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ನೋವು ವಿಶೇಷಾಧಿಕಾರಿ ವಿದ್ವಾನ್ ಆನಂದತೀರ್ಥ ಆಚಾರ್ಯ ಪಗಡಾಲ್ ಅವರಿಗಿತ್ತು.

ಆಕಸ್ಮಿವಾಗಿ ತಿರುಪತಿಗೆ ಬಂದಿದ್ದ ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ಶ್ರೀನಿವಾಸನ ಸನ್ನಿಧಾನದಲ್ಲಿ ಶನಿವಾರ ದಾಸಸಾಹಿತ್ಯ ಪ್ರಾಜೆಕ್ಟಿನಿಂದ ಗುರುವಂದನ ಕಾರ್ಯಕ್ರಮ ನಡೆಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!