ಸುದ್ದಿಕಿರಣ ವರದಿ
ಗುರುವಾರ, ಜುಲೈ 14
ದೊಡ್ಡಣಗುಡ್ಡೆ ಶ್ರೀ ದುರ್ಗಾ ಕ್ಷೇತ್ರದಲ್ಲಿ ಗುರುವಂದನೆ
ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಂದನೆ ನಡೆಯಿತು.
ಶ್ರೀಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅವರನ್ನು ಕ್ಷೇತ್ರದ ಭಕ್ತಾದಿಗಳು ಹಾಗೂ ಶ್ರೀ ಗುರೂಜಿ ಅವರ ಅಭಿಮಾನಿಗಳು ಗುರುವಂದನೆ ಸಲ್ಲಿಸಿದರು.
ಶ್ರೀಕ್ಷೇತ್ರದಲ್ಲಿ ಮನ್ಯು ನಾಮಕ ಪಾಯಸ ಹೋಮ, ಕಪಿಲ ಮಹರ್ಷಿಗಳ ವಿಶೇಷ ಪೂಜೆ ನಡೆಯಿತು.
ಶ್ರೀಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸರಸ್ವತಿ ಹವನ ಮತ್ತು ಗಣ ಹೋಮ ಋತ್ವಿಜರಿಂದ ನಡೆಯಿತು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
.