Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಎರಡನೇ ಶಾಖೆ ಆರಂಭ

ಎಚ್.ಡಿ.ಎಫ್.ಸಿ. ಬ್ಯಾಂಕ್ ಎರಡನೇ ಶಾಖೆ ಆರಂಭ

ಸುದ್ದಿಕಿರಣ ವರದಿ
ಸೋಮವಾರ, ಮಾರ್ಚ್ 21

ಎಚ್.ಡಿ.ಎಫ್.ಸಿ. ಬ್ಯಾಂಕ್ ಎರಡನೇ ಶಾಖೆ ಆರಂಭ
ಉಡುಪಿ: ಆಧುನಿಕ ಬ್ಯಾಂಕಿಂಗ್ ರಂಗದ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಎಚ್.ಡಿ.ಎಫ್.ಸಿ. ಬ್ಯಾಂಕಿನ ಉಡುಪಿಯ ಎರಡನೇ ಶಾಖೆ ಸೋಮವಾರ ಕುಂಜಿಬೆಟ್ಟು ಶ್ರೀ ಮಾ ಎನ್ ಕ್ಲೇವ್ ನಲ್ಲಿ ಕಾರ್ಯಾರಂಭ ಮಾಡಿತು.

ನೂತನ ಶಾಖೆಯನ್ನು ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಿದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ವಿದೇಶಿ ಬ್ಯಾಂಕ್ ಎಂಬ ಕಲ್ಪನೆ ಜನಸಾಮಾನ್ಯರಲ್ಲಿದೆ. ಆ ಭಾವನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಬ್ಯಾಂಕಿನ ಸಿಬಂದಿ ವರ್ತಿಸಬೇಕು. ಆರ್ಥಿಕ ವ್ಯವಹಾರವನ್ನು ಸಮರ್ಥವಾಗಿ ನಿಭಾಯಿಸುವ ಬ್ಯಾಂಕ್ ಗ್ರಾಹಕಸ್ನೇಹಿಯಾಗಿ ಮುನ್ನಡೆದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದರು.

ಅಭ್ಯಾಗತರಾಗಿದ್ದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಬ್ಯಾಂಕಿನಲ್ಲಿ ಉತ್ತಮ ಸೇವೆ ಲಭ್ಯವಿದೆ. ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ, ಗ್ರಾಹಕರ ವಿಶ್ವಾಸ ಗಳಿಸುವುದು ಅತ್ಯಗತ್ಯ ಎಂದರು.

ಬ್ಯಾಂಕಿನ ಹಿರಿಯ ಗ್ರಾಹಕ ಉಡುಪಿ ವೈಕುಂಠ ರಾಮನಾಥ ಪ್ರಭು ಶುಭ ಹಾರೈಸಿದರು.

ಸಮಾಜಸೇವಕಿ ಇಂದಿರಾ ಬಲ್ಲಾಳ್ ಗೌರವ ಅತಿಥಿಯಾಗಿದ್ದರು.

ಬ್ಯಾಂಕಿನ ಹಿರಿಯ ಪ್ರಬಂಧಕ ಕೆ. ರವೀಂದ್ರ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಬ್ಯಾಂಕಿನ ಮುಖ್ಯ ಪ್ರಬಂಧಕಿ ಸಿಂಧು ಎಸ್. ವಂದಿಸಿದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ಚೀಫ್ ಹೆಡ್ ವಾಸುದೇವ ಪಿ., ಸರ್ಕಲ್ ಹೆಡ್ ರಜನೀಶ್ ಬಾರುವ, ಬ್ರಹ್ಮಾವರ ಶಾಖಾ ಪ್ರಬಂಧಕ ವಿನಾಯಕ ಹೆಗಡೆ, ಮಣಿಪಾಲ ಶಾಖಾ ಪ್ರಬಂಧಕ ಉದಯಕುಮಾರ್, ಹಿರಿಯ ಸಿಬಂದಿ ಫ್ರಾನ್ಸಿಸ್ ಪೌಲ್ ಮೊದಲಾದವರಿದ್ದರು.

ಸುರತ್ಕಲ್ ಶಾಖಾ ಪ್ರಬಂಧಕ ಮುರಳೀಧರ್ ಪ್ರಸ್ತಾವನೆಗೈದು, ಬ್ಯಾಂಕಿನ ಪ್ರಗತಿ ನೋಟ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!