Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಹೆರ್ಗ ಗೋಳಿಕಟ್ಟೆಯಲ್ಲಿ ಸ್ವರ್ಣಾರತಿ

ಹೆರ್ಗ ಗೋಳಿಕಟ್ಟೆಯಲ್ಲಿ ಸ್ವರ್ಣಾರತಿ

ಉಡುಪಿ: ಹೆರ್ಗ ಹೊಳೆಬಾಗಿಲಿನ ಸ್ವರ್ಣಾ ನದಿ ತೀರದಲ್ಲಿ ಸ್ವರ್ಣಾರತಿ ಕಾರ್ಯಕ್ರಮ ನಡೆಯಿತು.
ಸ್ವರ್ಣಾ ಫ್ರೆಂಡ್ಸ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ವಾನ್ ಹೆರ್ಗ ಜಯರಾಮ ತಂತ್ರಿ, ನದಿಯಲ್ಲಿ ನಾವು ದೇವರ ಸಾನಿಧ್ಯ ನೋಡುತ್ತೆವೆ. ಹಾಗಾಗಿ ನದಿಯನ್ನು ಸ್ವಚ್ಛವಾಗಿಟ್ಟಲ್ಲಿ ದೇವರ ಸೇವೆ ಮಾಡಿದ ಪುಣ್ಯ ಬರುತ್ತದೆ.

ಸ್ವರ್ಣಾ ನದಿ ಹಲವಾರು ಕಡೆಗಳಲ್ಲಿ ಮಾಲಿನ್ಯದಿಂದ ಕೂಡಿದೆ. ನಗರಕ್ಕೆ ನೀರು ನೀಡುತ್ತಿರುವ ಈ ನದಿಯ ಸ್ವಚ್ಛತೆಗೆ ಎಲ್ಲರೂ ಪಣ ತೊಡಬೇಕಾಗಿದೆ ಎಂದರು.

ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ನದಿ ತೀರದಲ್ಲಿ ಗಿಡ ನೆಟ್ಟು ಶುಭ ಹಾರೈಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ಸ್ವರ್ಣ ಫ್ರೆಂಡ್ಸ್ ಗೌರವಾಧ್ಯಕ್ಷ ಹೆರ್ಗ ವಿಠಲದಾಸ ತಂತ್ರಿ, ನಗರಸಭೆ ಮಾಜಿ ಸದಸ್ಯ ಶ್ಯಾಮಪ್ರಸಾದ್ ಕುಡ್ವ, ಪರ್ಯಾವರಣ ಸಂರಕ್ಷಣೆ ಸಂಯೋಜಕ ತೋನ್ಸೆ ಗಣೇಶ ಶೆಣೈ, ಡಾ. ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಸೀತಾರಾಮ್ ನಾಯಕ್, ನಿರಂಜನ ಪ್ರಭು, ನಗರಸಭಾ ಸದಸ್ಯೆ ಆಶ್ವಿನಿ ಪೂಜಾರಿ, ಹೆರ್ಗ ಸ್ವಣರ್ಾರಾಧನಾ ಉಸ್ತುವಾರಿ ಸಂಕೇತ್ ಹೆರ್ಗ, ಸ್ವರ್ಣ ಫ್ರೆಂಡ್ಸ್ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!