ಸುದ್ದಿಕಿರಣ ವರದಿ
ಸೋಮವಾರ, ಫೆಬ್ರವರಿ 14
ಹಿಜಾಬ್ ವಿವಾದ ಬಳಿಕ ಆರಂಭಗೊಂಡ ಶಾಲೆ
ಉಡುಪಿ: ಹಿಜಾಬ್- ಕೇಸರಿ ವಿವಾದ ಹಿನ್ನೆಲೆಯಲ್ಲಿ ರಜಾ ಘೋಷಿಸಲಾಗಿದ್ದ ಪ್ರೌಢಶಾಲೆಗಳು ಸೋಮವಾರ ಪುನರಾರಂಭಗೊಂಡವು.
ಕೆಲವು ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಪಾಲಕರೊಂದಿಗೆ ಶಾಲೆಗೆ ಆಗಮಿಸಿದರು. ಪ್ರೌಢಶಾಲೆಯಲ್ಲಿ ಹಿಜಾಬ್- ಕೇಸರಿ ವಿವಾದ ಇಲ್ಲದ ಕಾರಣ ಎಂದಿನಂತೆ ಸಮವಸ್ತ್ರದಲ್ಲಿಯೇ ಮಕ್ಕಳು ಹಾಜರಾದರು. ಕೆಲವರು ಹಿಜಾಬ್ ಧರಿಸಿದ್ದರು.
ಶೀಘ್ರ ತರಗತಿ ಪುನರಾರಂಭಿಸಿ
ಈಮಧ್ಯೆ, ನಗರದ ಸರಕಾರಿ ಬಾಲಕಿಯರ ಪ. ಪೂ. ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಶೀಘ್ರ ಪಿಯು ತರಗತಿ ಆರಂಭಿಸುವಂತೆ ಮನವಿ ಮಾಡಿದಳು. ಕೇವಲ 6 ಮಂದಿಯಿಂದಾಗಿ ಸಾವಿರಾರು ಮಂದಿಗೆ ತೊಂದರೆಯಾಗಿದೆ. ಪರೀಕ್ಷೆಗಳು ಸಮೀಪಿಸುತ್ತಿರುವಂತೆಯೇ ಇನ್ನೂ ಪಾಠಗಳು ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ದಿಗಿಲಾಗುತ್ತಿದೆ ಎಂದು ಅಳಲು ತೋಡಿಕೊಂಡಳು.
ಕೂಡಲೇ ತರಗತಿಗಳನ್ನು ಆರಂಭಿಸುವಂತೆ ಆಕೆ ಆಗ್ರಹಿಸಿದಳು
ಘಟನೆಗೆ ಮುನ್ನ ಆಪ್ತ ಸ್ನೇಹಿತೆಯರಾಗಿದ್ದ ನಾವು, ಕಳೆದ ಡಿಸೆಂಬರ್ ನಲ್ಲಿ ಹಿಜಾಬ್ ವಿವಾದಿತ ವಿದ್ಯಾರ್ಥಿನಿಯರು ಮುಸ್ಲಿಮೇತರ ವಿದ್ಯಾರ್ಥಿನಿಯರೊಂದಿಗೆ ಬೇರೆಯೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕುಂಕುಮ ತೊಡದಂತೆ ತಾಕೀತು ಮಾಡುತ್ತಿದ್ದಾರೆ. ಹಿಂದೂ ಸಂಸ್ಕೃತಿ ತೊರೆದಲ್ಲಿ ಹಿಜಾಬ್ ಧರಿಸುವುದನ್ನು ಬಿಡುವುದಾಗಿಯೂ ಹೇಳುತ್ತಿದ್ದಾರೆ.