ಉಡುಪಿ: ಈಚೆಗೆ ನಿಧನರಾದ ಹಿರಿಯ ಚೇತನಗಳಾದ ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯ, ರಂಗಕರ್ಮಿ ಪ್ರೊ. ಉದ್ಯಾವರ ಮಾಧವ ಆಚಾರ್ಯ ಹಾಗೂ ಪತ್ರಕರ್ತ ಬಳಕೆದಾರರ ವೇದಿಕೆ ಸಂಚಾಲಕ ಕೆ. ದಾಮೋದರ ಐತಾಳ ಅವರಿಗೆ ಉಡುಪಿ ತುಳು ಶಿವಳ್ಳಿ ಮಾಧ್ವ ಮಹಾಮಂಡಳ (ತುಶಿಮಾಮ) ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ ಮತ್ತು ರಂಜನ್ ಕಲ್ಕೂರ, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಪಾಡಿಗಾರು ವಿಷ್ಣು ಭಟ್, ಶ್ರೀನಿವಾಸ ಉಪಾಧ್ಯ ಮೊದಲಾದವರು ಬ್ರಾಹ್ಮಣ ಸಮುದಾಯದ ಮೇರು ವ್ಯಕ್ತಿತ್ವದ ಸಾಧಕರ ಬಗ್ಗೆ ಮಾತನಾಡಿದರು.
ತುಶಿಮಾಮ ಅಧ್ಯಕ್ಷ ಅರವಿಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಅಂಬಲಪಾಡಿ, ಬೈಲೂರು ಜಯರಾಮ ಆಚಾರ್ಯ, ಕೋಶಾಧಿಕಾರಿ ವಾದಿರಾಜ ಆಚಾರ್ಯ ಇದ್ದರು.