Thursday, July 7, 2022
Home ಸಮಾಚಾರ ಭಾರತೀಯ ನೌಕಾಪಡೆಗೆ 2 ಹೆಲಿಕಾಪ್ಟರ್ ಹಸ್ತಾಂತರಿಸಿದ ಅಮೆರಿಕಾ

ಭಾರತೀಯ ನೌಕಾಪಡೆಗೆ 2 ಹೆಲಿಕಾಪ್ಟರ್ ಹಸ್ತಾಂತರಿಸಿದ ಅಮೆರಿಕಾ

ಸ್ಯಾನ್ ಡಿಯಾಗೋ: ಅಮೆರಿಕಾದ ನೌಕಾಪಡೆ ಭಾರತೀಯ ನೌಕಾಪಡೆಗೆ ಎರಡು ಎಮ್.ಆರ್.ಎಚ್ 60 ಆರ್ ಮಲ್ಟಿ ರೋಲ್ ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸಿದೆ. ಅದರಿಂದಾಗಿ ಭಾರತೀಯ ನೌಕಾಪಡೆಗೆ ಭೀಮಬಲ ಬಂದಂತಾಗಿದೆ.

ಭಾರತೀಯ ನೌಕಾಪಡೆಗೆ ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ಸ್ಯಾನ್ ಡಿಯಾಗೋದ ನಾರ್ತ್ ಐಲ್ಯಾಂಡ್ ನೌಕಾ ವಾಯು ನಿಲ್ದಾಣದಲ್ಲಿ ನಡೆಯಿತು. ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಂ.ಆರ್.ಎಚ್-60 ಹೆಲಿಕಾಪ್ಟರ್ ಗಳನ್ನು ಎಲ್ಲಾ ಹವಾಮಾನದಲ್ಲೂ ಬಳಸಬಹುದಾಗಿದೆ. ಹಲವಾರು ವಿಶಿಷ್ಟ ಉಪಕರಣ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಹೆಲಿಕಾಪ್ಟರ್ ಸಿದ್ಧಪಡಿಸಲಾಗಿದೆ. ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಈ ಎಂ.ಆರ್.ಎಚ್ ಹೆಲಿಕಾಪ್ಟರ್ ಹೆಚ್ಚಿಸಲಿದೆ.

ಭಾರತೀಯ ನೌಕಾಪಡೆಯ ಸಿಬ್ಬಂದಿಯ ಮೊದಲ ಬ್ಯಾಚ್, ಹೆಲಿಕಾಪ್ಟರ್ ಚಾಲನೆಗೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ತರಬೇತಿ ಪಡೆಯುತ್ತಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!