ಶ್ರೀಕೃಷ್ಣ ಬಾಲನಿಕೇತನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
(ಸುದ್ದಿಕಿರಣ ವರದಿ)
ಉಡುಪಿ: ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿ, ಶ್ರೀಕೃಷ್ಣ ರೋಟರಾಕ್ಟ್, ಇನ್ನರ್ ವ್ಹೀಲ್, ಶ್ರೀಕೃಷ್ಣ ಬಾಲನಿಕೇತನ ಇಂಟರಾಕ್ಟ್ ಕ್ಲಬ್ ಮತ್ತು ಚೈಲ್ಡ್ ಲೈನ್ ಉಡುಪಿ ಸಂಯುಕ್ತವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ರೋಟರಿ ಅಧ್ಯಕ್ಷ ಹೇಮಂತ್ ಕಾಂತ್ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮರ ಕೊಡುಗೆ ಸ್ಮರಿಸಿದರು. ಮುಂದಿನ ಪೀಳಿಗೆ ಅವರ ತ್ಯಾಗದ ಮಹತ್ವ ಅರಿತು ದೇಶವನ್ನು ಮುನ್ನಡೆಸಬೇಕು ಎಂದು ಆಶಿಸಿದರು.
ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಅಮೃತ ಮಹೋತ್ಸವದ ಶುಭಕಾಮನೆ ಸಲ್ಲಿಸಿದರು. ಗುರುರಾಜ ಭಟ್ ವಂದಿಸಿದರು.
ರೋಟರಾಕ್ಟ್ ಅಧ್ಯಕ್ಷೆ ಮೇಘನಾ ರಾವ್, ರೋಟರಿ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಮತ್ತು ರೋಟರಿ, ರೋಟರಾಕ್ಟ್, ಇನ್ನರ್ ವ್ಹೀಲ್, ಇಂಟರಾಕ್ಟ್ ಸದಸ್ಯರು, ಚೈಲ್ಡ್ ಲೈನ್ ಸದಸ್ಯರು, ಬಾಲನಿಕೇತನ ಮಕ್ಕಳು ಕಾರ್ಯದರ್ಶಿ ಭಾಗವಹಿಸಿದರು.