Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಇನ್ಫೋಸಿಸ್ ನಿಂದ ವೈದ್ಯಕೀಯ ಉಪಕರಣ ಕೊಡುಗೆ

ಇನ್ಫೋಸಿಸ್ ನಿಂದ ವೈದ್ಯಕೀಯ ಉಪಕರಣ ಕೊಡುಗೆ

ಉಡುಪಿ: ಇನ್ಫೋಸಿಸ್ ವತಿಯಿಂದ ಉಡುಪಿ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಲಾದ ಸುಮಾರು 70 ಲಕ್ಷ ರೂ. ಮೌಲ್ಯದ 10 ಆಕ್ಸಿಜನ್ ಕಾನ್ಸೆನ್ ಟ್ರೇಟರ್ ಹಾಗೂ 10 ವೆಂಟಿಲೇಟರ್ ಗಳನ್ನು ಗುರುವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾಧಿಕಾರಿ ಮಾತನಾಡಿ, ಇನ್ಫೋಸಿಸ್ ವತಿಯಿಂದ ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲೂ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಅಗತ್ಯವಿದ್ದ ಆರೋಗ್ಯ ಸಾಮಗ್ರಿ ನೀಡಲಾಗಿದ್ದು, ಕೋವಿಡ್ 2ನೇ ಅಲೆಯ ಈ ಸಮಯದಲ್ಲೂ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಅಕ್ಸಿಜನ್ ಕಾನ್ಸನ್ ಟ್ರೇಟರ್ ಮತ್ತು ವೆಂಟಿಲೇಟರ್ ನೀಡಿದ್ದು, ಸಂಸ್ಥೆ ಮುಖ್ಯಸ್ಥರಿಗೆ ಜಿಲ್ಲಾಡಳಿತ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪ್ರಸ್ತುತ ನೀಡಿರುವ ಉಪಕರಣಗಳಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ 5 ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸನ್ ಟ್ರೇಟರ್, ಕುಂದಾಪುರ ತಾಲೂಕು ಆಸ್ಪತ್ರೆಗೆ 2 ವೆಂಟಿಲೇಟರ್ ಮತ್ತು ಅಕ್ಸಿಜನ್ ಕಾನ್ಸನ್ ಟ್ರೇಟರ್ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆಗೆ 3 ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸನ್ ಟ್ರೇಟರ್ ನೀಡಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಇನ್ಫೋಸಿಸ್ ಮಂಗಳೂರು ವಿಭಾಗದ ಮ್ಯಾನೇಜರ್ ಗಳಾದ ವಾಸುದೇವ ಕಾಮತ್ ಮತ್ತು ಸಂದೀಪ್ ಡಿ’ಸಿಲ್ವಾ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!