Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಸನಾತನ ಧರ್ಮ ರಕ್ಷಣೆಗೆ ಎಲ್ಲರೂ ಕೈಜೋಡಿಸೋಣ

ಸನಾತನ ಧರ್ಮ ರಕ್ಷಣೆಗೆ ಎಲ್ಲರೂ ಕೈಜೋಡಿಸೋಣ

ಬೆಂಗಳೂರು: ಸನಾತನ ಧರ್ಮದ ಮೇಲೆ ಅನೇಕ ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಿವೆ. ಅದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ತಡೆಯಬೇಕಾಗಿದೆ. ಅನೇಕತೆಯಲ್ಲಿ ಏಕತೆ ಸಾರುವ ರಾಷ್ಟ್ರ ನಮ್ಮದು. ಈ ನಿಟ್ಟಿನಲ್ಲಿ ಎಲ್ಲರೂ ಧರ್ಮ ಸಂರಕ್ಷಣೆಗಾಗಿ ಕೈಜೋಡಿಸೋಣ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಗುರುವಾರ ಇಲ್ಲಿನ ಶ್ರೀ ಪುತ್ತಿಗೆ ಮಠದ ಗೋವರ್ಧನ ಕ್ಷೇತ್ರಕ್ಕೆ ಆಗಮಿಸಿದ್ದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸೌಹಾರ್ದ ಭೇಟಿಗಾಗಿ ಆಗಮಿಸಿದ್ದು, ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.

ಪುತ್ತಿಗೆ ಶ್ರೀಪಾದರ ಕಾರ್ಯಚಟುವಟಿಕೆಗಳಿಗೆ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು. ವಿಶೇಷವಾಗಿ ಶ್ರೀ ಗೋವರ್ಧನ ಕ್ಷೇತ್ರದ ಭವ್ಯತೆಯನ್ನು ಶ್ಲಾಘಿಸಿದರು.

ಸ್ವಾಮೀಜಿಯವರನ್ನು ಆದರಪೂರ್ವಕವಾಗಿ ಶ್ರೀಮಠಕ್ಕೆ ಸ್ವಾಗತಿಸಲಾಯಿತು.

ಪುತ್ತಿಗೆ ಶ್ರೀಪಾದರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ವಕೀಲ ನಟರಾಜ ಶರ್ಮಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!