Thursday, December 2, 2021
Home ಸಮಾಚಾರ ರಾಜ್ಯ ವಾರ್ತೆ ಪತ್ರಕರ್ತರ ರಾಜ್ಯ ಸಮ್ಮೇಳನ ಮುಂದೂಡಿಕೆ

ಪತ್ರಕರ್ತರ ರಾಜ್ಯ ಸಮ್ಮೇಳನ ಮುಂದೂಡಿಕೆ

ಪತ್ರಕರ್ತರ ರಾಜ್ಯ ಸಮ್ಮೇಳನ ಮುಂದೂಡಿಕೆ

ಬೆಂಗಳೂರು, ನ. 13 (ಸುದ್ದಿಕಿರಣ ವರದಿ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಲಬುರಗಿಯಲ್ಲಿ ಇದೇ ನವೆಂಬರ್ 27 ಮತ್ತು 28ರಂದು ನಡೆಯಬೇಕಾಗಿದ್ದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಮುಂದೂಡಲಾಗಿದೆ.

ಸಮ್ಮೇಳನಕ್ಕೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.

ಸಮ್ಮೇಳನದಲ್ಲಿ ಸಿಎಂ ಭಾಗವಹಿಸಲು ಕೂಡಾ ಅನುಮತಿ ಪಡೆಯಲೇಬೇಕು ಎನ್ನುವ ಆಯೋಗದ ನಿರ್ದೇಶನ ಹಿನ್ನೆಲೆಯಲ್ಲಿ ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಸರ್ಕಾರ ಪತ್ರ ಬರೆದರೂ ಅನುಮತಿ ಬರುವುದು ತಡವಾಗುತ್ತಿದೆ.

ಚುನಾವಣಾ ಆಯೋಗದ ಅನುಮತಿ ಇಲ್ಲದೆ ಸಿಎಂ ಮತ್ತು ಸಚಿವರು ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಸ್ವಾಗತ ಸಮಿತಿ ಕೋರಿಕೆ ಮೇರೆಗೆ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ.

ಮುಖ್ಯಮಂತ್ರಿಗಳ ದಿನಾಂಕ ಖಚಿತಪಡಿಸಿಕೊಂಡು ಸಮ್ಮೇಳನ ದಿನವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!