Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡೆಕಾರು ಗ್ರಾ.ಪಂ.: ಕಾಂಗ್ರೆಸ್ ವಿಜಯೋತ್ಸವ

ಕಡೆಕಾರು ಗ್ರಾ.ಪಂ.: ಕಾಂಗ್ರೆಸ್ ವಿಜಯೋತ್ಸವ

ಉಡುಪಿ: ಈಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವ ನಡೆಯಿತು.
ಕನ್ನರ್ಪಾಡಿ, ಕಟ್ಟೆಗುಡ್ಡೆ, ಕುತ್ಪಾಡಿ, ಕಡೆಕಾರ್ ಮಾರ್ಗವಾಗಿ ವಿಜಯೋತ್ಸವ ಮೆರವಣಿಗೆ ಸೀಬ್ರಿಜ್ ತಲುಪಿ ಅಭಿನಂದನಾ ಸಭೆ ನಡೆಸಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕಡೆಕಾರು ಪಂಚಾಯತ್ ನಾಗರಿಕರು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಚುನಾಯಿಸಿದ್ದಾರೆ. ಕಡೆಕಾರು ಗ್ರಾಮ ಪಂಚಾಯತನ್ನು ಮಾದರಿ ಪಂಚಾಯತ್ ಆಗಿ ಅಭಿವೃದ್ಧಿಪಡಿಸುವ ಮಹತ್ತರ ಜವಾಬ್ದಾರಿ ಚುನಾಯಿತ ಸದಸ್ಯರ ಮೇಲಿದೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿವಾಕರ ಕುಂದರ್ ಮಾತನಾಡಿ, ಚುನಾಯಿತ ಸದಸ್ಯರು ಕಡೆಕಾರು ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಚುನಾಯಿತ ಸದಸ್ಯರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ದಿನಕರ ಪೂಜಾರಿ ಹೇರೂರು, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ವನಜಾ ಜಯಕರ್, ತಾರಾನಾಥ ಸುವರ್ಣ, ಸತೀಶ್ ಕೋಟ್ಯಾನ್, ನವೀನ್ ಶೆಟ್ಟಿ, ವೀಕ್ಷಕರಾದ ಸುಕೇಶ್ ಕುಂದರ್, ಚಂದ್ರಮೋಹನ್ ಮತ್ತು ಆಕಾಶ್, ಎಸ್.ಸಿ. ಘಟಕ ಬ್ಲಾಕ್ ಅಧ್ಯಕ್ಷ ಗಣೇಶ್ ನೆರ್ಗಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಗ್ರಾ. ಪಂ. ಚುನಾಯಿತ ಅಭ್ಯರ್ಥಿಗಳು, ಮಾಜಿ ಸದಸ್ಯರು ಮೊದಲಾದವರಿದ್ದರು.

ಜತಿನ್ ಕಡೆಕಾರ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!