Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಿಯಾಳಿ ಬ್ರಹ್ಮಕಲಶೋತ್ಸವ ಕೊಡೆ ಶಾಲಾ ಮಕ್ಕಳಿಗೆ ವಿತರಣೆ

ಕಡಿಯಾಳಿ ಬ್ರಹ್ಮಕಲಶೋತ್ಸವ ಕೊಡೆ ಶಾಲಾ ಮಕ್ಕಳಿಗೆ ವಿತರಣೆ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಕಡಿಯಾಳಿ ಬ್ರಹ್ಮಕಲಶೋತ್ಸವ ಕೊಡೆ ಶಾಲಾ ಮಕ್ಕಳಿಗೆ ವಿತರಣೆ
ಉಡುಪಿ: ಸಮಗ್ರ ಜೀರ್ಣೋದ್ಧಾರಗೊಂಡು ಅತ್ಯಂತ ವೈಭವದಿಂದ ನಡೆದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಮಾಜಿಕ ಪರಿಕಲ್ಪನೆಯ ಕೊಡೆಗಳನ್ನು ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ 1ರಿಂದ 7ನೇ ತರಗತಿಯ 186 ಮಂದಿ ಮಕ್ಕಳು ಮತ್ತು ಧ್ಯಾಪಕರಿಗೆ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಡಿಯಾಳಿ ಎಜುಕೇಶನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರತ್ನ ಕುಮಾರ್, ಕಡಿಯಾಳಿ ಶಾಲಾ ಮಾಜಿ ಮುಖ್ಯೋಪಾಧ್ಯಾಯ ಪಿ ಕೆ ಸದಾನಂದ ಶರ್ಮ, ಶಾಲಾ ನಿವೃತ್ತ ಅಧ್ಯಾಪಕ ಲಕ್ಷ್ಮೀನಾರಾಯಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ನಾಯ್ಕ ಇದ್ದರು.

ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಸ್ವಾಗತಿಸಿ, ವ್ಯವಸ್ಥಾಪನ ಮಂಡಳಿ ಸದಸ್ಯ ಮಂಜುನಾಥ ಹೆಬ್ಬಾರ್ ವಂದಿಸಿದರು.

ವ್ಯವಸ್ಥಾಪನ ಮಂಡಳಿ ಸದಸ್ಯೆ ಸಂಧ್ಯಾ ಪ್ರಭು, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಮುರಳಿಕೃಷ್ಣ ಉಪಾಧ್ಯ, ಸಂದೀಪ್ ಸನಿಲ್, ಚೇತನ್ ಕುಮಾರ್ ದೇವಾಡಿಗ ಕಡಿಯಾಳಿ, ಗಣೇಶ್ ಆಚಾರ್ಯ ಕಡಿಯಾಳಿ, ಸಂತೋಷ್ ಕಿಣಿ ಮತ್ತು ವಿದ್ಯಾ ಶ್ಯಾಮಸುಂದರ್, ಶಾಲಾ ನಿವೃತ್ತ ಶಿಕ್ಷಕಿ ಕಮಲಾಕ್ಷಿ ಉಪಾಧ್ಯಾಯ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!