Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಿಯಾಳಿ ಸುಬ್ರಹ್ಮಣ್ಯ ಗುಡಿ ಶಿಲಾನ್ಯಾಸ

ಕಡಿಯಾಳಿ ಸುಬ್ರಹ್ಮಣ್ಯ ಗುಡಿ ಶಿಲಾನ್ಯಾಸ

ಉಡುಪಿ: ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಪ್ರಾಂಗಣದಲ್ಲಿರುವ ಸುಬ್ರಹ್ಮಣ್ಯ ಹಾಗೂ ನಾಗದೇವರ ನೂತನ ಶಿಲಾಮಯ ಗುಡಿ ರಚನೆಗೆ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ ಗುರುವಾರ ಶಿಲಾನ್ಯಾಸ ನೆರವೇರಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯು. ಮೋಹನ ಉಪಾಧ್ಯಾಯ ಇದ್ದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು. ಸತೀಶ್ ಕುಲಾಲ್ ವಂದಿಸಿದರು.

ಕಡಿಯಾಳಿ ಕಾತ್ಯಾಯನಿ ಮಂಟಪ ರಚನೆಗಾಗಿ ಕೆ. ಮುರಳಿಕೃಷ್ಣ ಉಪಾಧ್ಯಾಯ 5 ಲಕ್ಷ ರೂ., ಅರ್ಚಕ ಕಡಿಯಾಳಿ ಕೆ. ರತ್ನಾಕರ ಉಪಾಧ್ಯಾಯ 1 ಲಕ್ಷ ರೂ., ಕಡಿಯಾಳಿ ಜೀವರತ್ನ ದೇವಾಡಿಗ 56,565 ರೂ. ಕಾಣಿಕೆ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!