Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಿಯಾಳಿ ದೇಗುಲ: ಫ್ಲೆಕ್ಸ್ ಬ್ಯಾನರ್ ಗಳಿಗೆ ಮುಕ್ತಿ

ಕಡಿಯಾಳಿ ದೇಗುಲ: ಫ್ಲೆಕ್ಸ್ ಬ್ಯಾನರ್ ಗಳಿಗೆ ಮುಕ್ತಿ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಕಡಿಯಾಳಿ ದೇಗುಲ: ಫ್ಲೆಕ್ಸ್ ಬ್ಯಾನರ್ ಗಳಿಗೆ ಮುಕ್ತಿ
ಉಡುಪಿ: ಕಡಿಯಾಳಿ ದೇವಸ್ಥಾನದಲ್ಲಿ ಜೂ. 1ರಿಂದ 9ರ ವರೆಗೆ ನಡೆದ ಬ್ರಹ್ಮಕಲಶೋತ್ಸವ ನಿಮಿತ್ತ ನಗರದ ವಿವಿಧೆಡೆ ಹಾಕಿದ ಫ್ಲೆಕ್ಸ್ ಬ್ಯಾನರ್, ಬಂಟಿಂಕ್ಸ್ ವಿಶೇಷ ಅಲಂಕಾರಗಳನ್ನು ಶನಿವಾರ ರಾತ್ರಿ ತೆಗೆಯಲು ಕಾರ್ಯಕರ್ತರು ಆರಂಭಿಸಿದ್ದಾರೆ. ಬಹುತೇಕ ಅಲಂಕಾರಗಳನ್ನು ತೆಗೆದಿದ್ದು ಮಿಕ್ಕುಳಿದ ಅಲಂಕಾರಗಳನ್ನು ರವಿವಾರ ರಾತ್ರಿ ತೆಗೆಯಲು ಆರಂಭಿಸಲಾಗಿದೆ. ಸೋಮವಾರ ಹಿಂದಿನ ಸ್ಥಿತಿಗೆ ಮರಳುತ್ತದೆ.

ಇದೇ ವೇಳೆ ಕಡಿಯಾಳಿ ಶಾಲೆ, ಎಂಜಿಎಂ ಕಾಲೇಜಿನ ಮೈದಾನವನ್ನು ಸ್ವಚ್ಛಗೊಳಿಸುವ ಕೆಲಸವೂ ನಡೆದಿದೆ. ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಾಕಲಾದ ಬ್ಯಾನರ್ ಬಂಟಿಂಗ್ಸ್ ಮತ್ತು ಬಾವುಟಗಳನ್ನು ಕಡಿಯಾಳಿಯ ಸಮಸ್ತ ಯುವ ಸ್ವಯಂಸೇವಕರ ಪಡೆ ಛಲದಿಂದ ಯಾವ ರೀತಿ ಉಡುಪಿಯನ್ನು ಸಂಪೂರ್ಣ ಅಲಂಕಾರ ಮಾಡಲಾಗಿತ್ತೋ ಅಷ್ಟೇ ಶ್ರದ್ದೆಯಿಂದ ನಿನ್ನೆ ಮತ್ತು ಇಂದು ತೆರವುಗೊಳಿಸಿದರು. ಇದು ಕಡಿಯಾಳಿಯ ದೇವಸ್ಥಾನದ ಸ್ವಯಂಸೇವಕರ ಪಡೆಯ ಕಾರ್ಯಶೈಲಿ ಎಂದು ಕಿಣಿ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!