ಗೋಶಾಲೆಗೆ ವಾಹನ ಕೊಡುಗೆ
(ಸುದ್ದಿಕಿರಣ ವರದಿ)
ಮಂಗಳೂರು: ಕಾವೂರಿನ ಸುಮೇಧ ಫೌಂಡೇಶನ್ ಆಶ್ರಯದ ಉಡುಪಿ ಪೇಜಾವರ ಮಠದ ಗೋಶಾಲೆಗೆ ಕಾಪುವಿನ ಯುವ ಉದ್ಯಮಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಅವರು ಟಾಟಾ ಏಸ್ ವಾಹನವನ್ನು ಕೊಡುಗೆಯಾಗಿ ನೀಡಿದರು. ಸಂಸ್ಥೆಯ ಗೋ ಸೇವೆಯನ್ನು ಶ್ಲಾಘಿಸಿ, ಶುಭ ಹಾರೈಸಿದರು.
ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರು ವಾಹನ ಪೂಜೆ ನೆರವೇರಿಸಿದ ಬಳಿಕ ಪೇಜಾವರ ಗೋಶಾಲೆಯ ಸದಸ್ಯರಿಗೆ ವಾಹನದ ಕೀಲಿಕೈಯನ್ನು ದಿಲೇಶ್ ಶೆಟ್ಟಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸುಮೇಧ ಫೌಂಡೇಶನ್ ಟ್ರಸ್ಟಿಗಳಾದ ರಕ್ಷಿತ್ ಎ. ಕುಮಾರ್, ಮನೋಜಿತ್ ಕೆ. ವಿ., ರಣದೀಪ್ ಕಾಂಚನ್ ಹಾಗೂ ಪ್ರಸಾದ್ ಹೆಗ್ಡೆ, ಸಂದೀಪ್ ನಾಯಕ್, ಅನುದೀಪ್, ಶಿವಪ್ರಸಾದ್, ಹರೀಶ್ ಕುಲಾಲ್ ಇದ್ದರು