ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮಹಾಬಲೇಶ್ವರ ರಾವ್ ಭೇಟಿ ನೀಡಿ ಕೃಷ್ಣ ದರ್ಶನದ ಬಳಿಕ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿ ಎ.ಜಿ.ಎಂ. ಗೋಪಾಲಕೃಷ್ಣ ಸಾಮಗ, ಮುಖ್ಯ ಪ್ರಬಂಧಕ ವಾದಿರಾಜ್, ರಥಬೀದಿ ಶಾಖೆ ವ್ಯವಸ್ಥಾಪಕ ಮುರಳೀಧರ ಐತಾಳ್, ಪರ್ಯಾಯ ಮಠ ಪಿ.ಆರ್.ಓ ಕಡೆಕಾರ್ ಶ್ರೀಶ ಭಟ್ ಮೊದಲಾದವರಿದ್ದರು