Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಮಾಧ್ಯಮ ಅಕಾಡೆಮಿಗೆ ನೂತನ ಸಾರಥ್ಯ

ಮಾಧ್ಯಮ ಅಕಾಡೆಮಿಗೆ ನೂತನ ಸಾರಥ್ಯ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ಕೆ. ಸದಾಶಿವ ಶೆಣೈ ಅಕಾಡೆಮಿಯ ನೂತನ ಅಧ್ಯಕ್ಷರಾಗಿದ್ದು, ಶಿವಮೊಗ್ಗ ಕನ್ನಡಪ್ರಭ ದಿನಪತ್ರಿಕೆ ಪ್ರಧಾನ ವರದಿಗಾರ ಗೋಪಾಲ ಸಿಂಗಪ್ಪಯ್ಯ ಯಡಗೆರೆ, ಕೆ. ಕೆ. ಮೂರ್ತಿ, ವಿಶ್ವವಾಣಿ ಹಿರಿಯ ವರದಿಗಾರ ಶಿವಕುಮಾರ ಬೆಳ್ಳಿತಟ್ಟೆ, ಗುರುರಾಜ ಕೂಡ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷ ಸಿ. ಕೆ. ಮಹೇಂದ್ರ, ಮಂಗಳೂರು ಜಯಕಿರಣ ದೈನಿಕ ಹಿರಿಯ ವರದಿಗಾರ ಜಗನ್ನಾಥ ಬಾಳ, ಕಲ್ಬುರ್ಗಿ ಬುದ್ಧಲೋಕ ಸಂಪಾದಕ ದೇವೇಂದ್ರಪ್ಪ ಕಪನೂರು, ಶಿವಮೊಗ್ಗ ನಮ್ಮ ನಾಡು ಕೆ. ವಿ. ಶಿವಕುಮಾರ್ ಅವರನ್ನು ಸದಸ್ಯರನ್ನಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಜೆಸಿಂತ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!