ಉಡುಪಿ: ಇಲ್ಲಿನ ತೆಂಕಪೇಟೆ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜಿ.ಎಸ್.ಬಿ. ಸಭಾ ಕೋಡಿಕಲ್ ಮಂಗಳೂರು, ಅಕ್ಷಯಪಾತ್ರೆ ಫೌಂಡೇಶನ್ ಮಂಗಳೂರು ಮತ್ತು ಇಸ್ಕಾನ್ ಫೌಂಡೇಶನ್ ಸಹಯೋಗದೊಂದಿಗೆ ಕೋವಿಡ್ ನೆರವಿನ ಕಿಟ್ ವಿತರಣೆ ಭಾನುವಾರ ಭುವನೇಂದ್ರ ಮಂಟಪದಲ್ಲಿ ನಡೆಯಿತು.
ಇಸ್ಕಾನ್ ಕೋವಿಡ್ ಪರಿಹಾರ ಕಾರ್ಯಕ್ರಮ ಸಂಯೋಜಕ ಶ್ರೀ ಸನಂದನದಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಅಕ್ಷಯಪಾತ್ರೆ ಯೋಜನೆಯಡಿ ಪ್ರಸಾದ ರೂಪವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 10 ಕೋ. ರೂ. ಮೌಲ್ಯದ ಆಹಾರ ಪಡಿತರ ಕಿಟ್ ಗಳನ್ನು 12 ಲಕ್ಷ ಮಂದಿಗೆ ವಿತರಿಸಲಾಗಿದೆ. ಅಂತೆಯೇ ಉಡುಪಿ ಪರಿಸರದ ಆರ್ಥಿಕವಾಗಿ ಹಿಂದುಳಿದ ಜಿ.ಎಸ್.ಬಿ. ಸಮಾಜದ 125 ಮಂದಿಗೆ ದಿನ ಬಳಕೆಯ ವಸ್ತು ಕಿಟ್ ವಿತರಿಸಲಾಗುತ್ತಿದೆ ಎಂದರು.
ಅಕ್ಷಯಪಾತ್ರೆ ಫೌಂಡೇಶನ್ ಅಧ್ಯಕ್ಷ ಗಣೇಶ್ ಕಾಮತ್, ಕಾರ್ಯದರ್ಶಿ ರಮಾನಂದ ಶೆಣೈ, ಬಸ್ತಿಕಾರ್ ಪುರುಷೋತ್ತಮ ಶೆಣೈ, ನರಸಿಂಹ ಪ್ರಭು ಕುಂಬ್ಳೆ, ಸಂತೋಷ್ ಪೈ, ಮಾಧವ ಪ್ರಭು, ವಾಮನ ನಾಯಕ್, ಇಂದಿರಾ ಕಾಮತ್ ಇದ್ದರು.
ದೇವಳದ ಆಡಳಿತ ಮಂಡಳಿ ಸದಸ್ಯ ವಸಂತ ಕಿಣಿ ಸ್ವಾಗತಿಸಿ, ಭವ್ಯ ಭಟ್ ನಿರೂಪಿಸಿದರು.