ಮುಜರಾಯಿ ಇಲಾಖೆಗೆ ಕೋಟ ಸೂಕ್ತ
(ಸುದ್ದಿಕಿರಣ ವರದಿ)
ಉಡುಪಿ: ಎರಡು ಬಾರಿ ಮುಜರಾಯಿ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿ, ಸಾಕಷ್ಟು ಸುಧಾರಣೆ ತಂದಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೇ ಆ ಇಲಾಖೆಯನ್ನು ವಹಿಸಿಕೊಡಬೇಕಿತ್ತು. ಆ ಇಲಾಖೆಗೆ ಅವರೇ ಸೂಕ್ತ ವ್ಯಕ್ತಿ ಎಂದು ಸಾಮಾಜಿಕ ಕಾರ್ಯಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ಹೇಳಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಇಲಾಖೆಯನ್ನು ಚೆನ್ನಾಗಿ ನಿಭಾಯಿಸಿದ್ದರು. ಅವರನ್ನೇ ಆ ಖಾತೆಗೆ ನಿಯೋಜಿಸಬೇಕು ಎನ್ನುವುದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕರಾವಳಿಯ ಅನೇಕ ಮಠಾಧೀಶರು, ದೇವಳಗಳ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಆಗ್ರಹವಾಗಿದೆ. ಮುಖ್ಯಮಂತ್ರಿ ಪರಾಮರ್ಶಿಸಬೇಕು ಎಂದು ವಾಸುದೇವ ಭಟ್ ತಿಳಿಸಿದ್ದಾರೆ