Monday, August 15, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಆಸ್ಟಿನ್ ನಗರದಲ್ಲಿ ಕೃಷ್ಣ ಮಂದಿರ ಸ್ಥಾಪನೆಗೆ ನಿರ್ಧಾರ

ಆಸ್ಟಿನ್ ನಗರದಲ್ಲಿ ಕೃಷ್ಣ ಮಂದಿರ ಸ್ಥಾಪನೆಗೆ ನಿರ್ಧಾರ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 4

ಆಸ್ಟಿನ್ ನಗರದಲ್ಲಿ ಕೃಷ್ಣ ಮಂದಿರ ಸ್ಥಾಪನೆಗೆ ನಿರ್ಧಾರ
ಉಡುಪಿ: ಅಮೆರಿಕಾದ ಆಸ್ಟಿನ್ ನಗರದಲ್ಲಿ ಶ್ರೀಕೃಷ್ಣ ಮಂದಿರ ಸ್ಥಾಪಿಸುವುದಾಗಿ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಕಟಿಸಿದರು.

ಅಲ್ಲಿನ ಭಕ್ತ ಜನರ ಅಪೇಕ್ಷೆ ಮೇರೆಗೆ ಮಹಾನಗರಕ್ಕೆ ಆಗಮಿಸಿದ್ದ ಶ್ರೀಪಾದರು ಅಲ್ಲಿನ ಆಸ್ತಿಕ ಜನರ ಉತ್ಸಾಹ, ಭಕ್ತಿಭಾವಗಳನ್ನು ಗಮನಿಸಿ, ಅವರ ಅಪೇಕ್ಷೆಯಂತೆ ಅವರ ಸಾಧನೆಗಳಿಗೆ ಅನುಕೂಲವಾಗಲು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗವಂತೆ ಭವ್ಯ ಶ್ರೀಕೃಷ್ಣ ಮಂದಿರ ನಿರ್ಮಾಣ ಮಾಡುವ ತಮ್ಮ ಸಂಕಲ್ಪ ಪ್ರಕಟಿಸಿದರು.

ಅದಕ್ಕೂ ಪೂರ್ವದಲ್ಲಿ ಸ್ಥಳವೊಂದನ್ನು ಆಯ್ಕೆ ಮಾಡಿ ಶ್ರೀ ವೇಂಕಟಕೃಷ್ಣ ವೃಂದಾವನ ಪ್ರಾರಂಭಿಸಿ, ಪುರೋಹಿತರನ್ನು ನಿಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.

ವಿಶ್ವದಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಸಾರದಲ್ಲಿ ನಿರತರಾಗಿರುವ ಪುತ್ತಿಗೆ ಶ್ರೀಪಾದರ ಈ ಅಭಿಯಾನದಲ್ಲಿ ಅಮೆರಿಕಾದ 10ನೇ ಶ್ರೀಕೃಷ್ಣ ಮಂದಿರ ಆಸ್ಟಿನ್ ನಗರದಲ್ಲಿ ಮೂಡಿಬರಲಿದೆ. 2024ರ ಜನವರಿ 18ರಂದು ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯ ದೀಕ್ಷೆಯನ್ನು ಶ್ರೀಗಳು ವಹಿಸಿಕೊಳ್ಳಲಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!