Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷಿ ವಲಯದಲ್ಲಿ ಮನೆ ನಿರ್ಮಾಣ ಅವಕಾಶಕ್ಕೆ ಆಗ್ರಹ

ಕೃಷಿ ವಲಯದಲ್ಲಿ ಮನೆ ನಿರ್ಮಾಣ ಅವಕಾಶಕ್ಕೆ ಆಗ್ರಹ

ಬೆಂಗಳೂರು: ಕೃಷಿ ವಲಯದಲ್ಲಿ ಸ್ವಂತ ಮನೆ ಕಟ್ಟಲು ಅವಕಾಶ ಮಾಡಿಕೊಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಶುಕ್ರವಾರ ಅಧಿವೇಶನದಲ್ಲಿ ಆಗ್ರಹಿಸಿದರು.

ಕೃಷಿ ವಲಯದಲ್ಲಿ ಕನ್ವರ್ಷನ್ (ಭೂ ಪರಿವರ್ತನೆ) ಸಮಸ್ಯೆ, ಮನೆ ಕಟ್ಟಲು ಅವಕಾಶ ನಿರಾಕರಣೆ ಬಗ್ಗೆ ಸರ್ಕಾರದ ತೀವ್ರ ಗಮನ ಸೆಳೆದರು. 15 ದಿನದೊಳಗಾಗಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಪ್ರಾಧಿಕಾರದಲ್ಲಿರುವಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿಯೂ ಕನ್ವರ್ಷನ್ ಮತ್ತು ಮನೆ ಕಟ್ಟಲು ಅವಕಾಶ ನೀಡುವುದಾಗಿ ಸರ್ಕಾರದ ಪರವಾಗಿ ಸಚಿವ ಶಿವರಾಮ ಹೆಬ್ಬಾರ್ ಉತ್ತರ ನೀಡಿದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸ್ವಂತ ಜಾಗದಲ್ಲಿ 10 ಸೆಂಟ್ಸ್ ಜಾಗದಲ್ಲಿ ಈವರೆಗೆ ಕನ್ವರ್ಷನ್ ಆಗದೆ, ವಲಯ ಬದಲಾವಣೆ ಆಗದೆ ಸ್ವಂತ ಮನೆ ಕಟ್ಟಲು ಆಗದೆ ಕಷ್ಟಪಡುತ್ತಿದ್ದಾರೆ.

ಬಂಟ್ವಾಳ ಪ್ರಾಧಿಕಾರ ಮತ್ತು ಮಂಗಳೂರು ಪ್ರಾಧಿಕಾರದಲ್ಲಿ 5 ಸೆಂಟ್ಸ್ ನಷ್ಟು ಕನ್ವರ್ಷನ್ ಮತ್ತು ಮನೆ ಕಟ್ಟಲು ಅವಕಾಶವಿದೆ ಎಂದು ಸದನದಲ್ಲಿ ತಿಳಿಸಿದರು.

ಅಭಿನಂದನೆ
ಕಳೆದ ನಾಲ್ಕು ವರ್ಷದಿಂದ ಬಾಕಿ ಇದ್ದ ಈ ವಿಷಯವನ್ನು ಶಾಸಕ ಕೆ. ರಘುಪತಿ ಭಟ್ ಪಟ್ಟುಹಿಡಿದರು ಛಲದಿಂದ ಮಾಡಿದ ಜನಪರ ಹೋರಾಟಕ್ಕೆ ಶಾಸಕರನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಅಭಿನಂದನೆ ಸಲ್ಲಿಸಿದ್ದಾರೆ.

ಆದಷ್ಟು ಶೀಘ್ರ ಸರ್ಕಾರ ಈ ಆದೇಶ ಮಾಡಿದಾಗ ಸಾಮಾನ್ಯ ಮತ್ತು ಮಧ್ಯಮ ವರ್ಗದವರ ತಮ್ಮ ಸ್ವಂತ ಸೂರು ಕಟ್ಟುವ ಕನಸು ನನಸಾಗಲಿದೆ ಎಂದು ಕಿಣಿ ಹೇಳಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!