Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಕುಕ್ಕೆ ಪೂಜಾ ಪದ್ಧತಿ ಬದಲಾವಣೆ ಸಲ್ಲದು

ಕುಕ್ಕೆ ಪೂಜಾ ಪದ್ಧತಿ ಬದಲಾವಣೆ ಸಲ್ಲದು

ಉಡುಪಿ: ಆಯಾ ದೇವಾಲಯಗಳಲ್ಲಿ ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡ ಕ್ರಮದಂತೆ ಪೂಜೆ ನಡೆಯುವಂತೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ಅಲ್ಲಿನ ಪೂಜಾ ಪದ್ಧತಿಯಂತೆಯೇ ನಡೆಯಬೇಕು. ಪೂಜಾ ಪದ್ಧತಿ ಬದಲಾವಣೆ ಕೂಡದು ಎಂದು ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನೂಚಾನವಾಗಿ ನಡೆದುಬಂದ ಕ್ರಮದಂತೆಯೇ ಪೂಜಾ ಕ್ರಮ ನಡೆಯಬೇಕು. ಆಚಾರ್ಯ ಮಧ್ವ ಪ್ರಣೀತ ತಂತ್ರಸಾರ ಕ್ರಮದಂತೆ ಅಲ್ಲಿನ ಪೂಜಾದಿಗಳು ನಡೆಯುತ್ತಿವೆ. ಅದೇ ಕ್ರಮ ನಡೆಯಬೇಕು ಎಂದು ಆಗ್ರಹಿಸಿದರು.

ರುದ್ರ ದೇವರ ಮೇಲೆ ದ್ವೇಷವಿಲ್ಲ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರ ಪಾರಾಯಣ ನಡೆಸುತ್ತಿದ್ದೇವೆ ಎಂದರು.

ಸುಬ್ರಹ್ಮಣ್ಯ ಕ್ಷೇತ್ರ ಸ್ಕಂದ ಕೇಂದ್ರಿತ ದೇವಸ್ಥಾನವಾಗಿದ್ದು, ಸ್ಕಂದನ ಸ್ಮರಣೆ ನಡೆಯುತ್ತದೆ. ಹಾಗಾಗಿ, ಶಿವನ ಕಡೆಗಣನೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಶ್ರೀಪಾದರು ಪ್ರತಿಪಾದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!