Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಅಯೋಧ್ಯಾ ರಾಮನ ಗರ್ಭಗುಡಿಗೆ ಶಿಲಾನ್ಯಾಸ

ಅಯೋಧ್ಯಾ ರಾಮನ ಗರ್ಭಗುಡಿಗೆ ಶಿಲಾನ್ಯಾಸ

ಸುದ್ದಿಕಿರಣ ವರದಿ
ಬುಧವಾರ, ಜೂನ್ 1

ಅಯೋಧ್ಯಾ ರಾಮನ ಗರ್ಭಗುಡಿಗೆ ಶಿಲಾನ್ಯಾಸ
ಲಕ್ನೋ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಬುಧವಾರ ಜ್ಯೇಷ್ಠ ಶುದ್ಧ ಬಿದಿಗೆ ಪರ್ವದಿನದಂದು ಶ್ರೀರಾಮನ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು ಹಾಗೂ ಮಂದಿರ ನಿರ್ಮಾಣ ಉಸ್ತುವಾರಿ ನೃಪೇಂದ್ರ ಮಿಶ್ರಾ ಮೊದಲಾವರ ಹೆಸರನ್ನು ಪ್ರತ್ಯೇಕವಾಗಿ ನಮೂದಿಸಲಾಗಿದ್ದ ಬೃಹತ್ ಶಿಲೆಗಳಿಗೆ ವಿಧ್ಯುಕ್ತ ಪೂಜೆ ನೆರವೇರಿಸಿ ಶಿಲಾನ್ಯಾಸ ನೆರವೇರಿಸಲಾಯಿತು.

ಕಳೆದ ಮೂರು ದಿನಗಳಿಂದ ಈ ಸ್ಥಳದಲ್ಲಿ ವೈದಿಕರಿಂದ ಚತುರ್ವೇದ ಮತ್ತು ರಾಮಾಯಣಗಳ ಸಾಮೂಹಿಕ ಪಾರಾಯಣ ಹಾಗೂ ಹೋಮ ಹವನಾದಿಗಳನ್ನು ನೆರವೇರಿಸಲಾಗಿತ್ತು.

ಸಮಾರಂಭದಲ್ಲಿ ನೂರಾರು ಸಂತರು ಭಕ್ತರು ಪಾಲ್ಗೊಂಡಿದ್ದರು.

ಎಲ್ಲರಿಗೂ ಟ್ರಸ್ಟ್ ವತಿಯಿಂದ ಸಿಹಿ ವಿತರಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್, ಸದಸ್ಯರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹಾಗೂ ಎಲ್.ಆ್ಯಂಡ್.ಟಿ ಕಂಪೆನಿ ಪ್ರಮುಖ ನೃಪೇಂದ್ರ ಮಿಶ್ರಾ, ವಿಹಿಂಪ ಕರ್ನಾಟಕದ ಪ್ರಮುಖರಲ್ಲೋರ್ವರಾದ ಗೋಪಾಲ್ ಜಿ ಮೊದಲಾದವರಿದ್ದರು.

ಸಂಚಿಕೆ ಅನಾವರಣ
ಇದೇ ಸಂದರ್ಭದಲ್ಲಿ ಮಂದಿರ ನಿರ್ಮಾಣದ ಆಂದೋಲನ ಮತ್ತು ನ್ಯಾಯಾಲಯದ ತೀರ್ಪು ಮತ್ತು ಆ ನಂತರದಿಂದ ಈ ಹಂತದ ವರೆಗಿನ ಎಲ್ಲ ಬೆಳವಣಿಗೆಗಳ ಸಚಿತ್ರ ವರದಿಯನ್ನೊಳಗೊಂಡ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಸಂಚಿಕೆಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನಿರ್ವಹಿಸಿದ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಲಾಗಿದೆ.

ವಿಷ್ಣು ಸಹಸ್ರನಾಮ ಪಠಣ
ಶಿಲಾನ್ಯಾಸ ಸಂದರ್ಭದಲ್ಲಿ ಪೇಜಾವರ ಶ್ರೀಗಳು ವಿಷ್ಣು ಸಹಸ್ರನಾಮ ಪಾರಾಯಣಗೈದರು. ಉಡುಪಿ ಕೃಷ್ಣನ ಪ್ರಸಾದ, ಸಾಲಿಗ್ರಾಮ ಶಿಲೆ ಮತ್ತು ನವರತ್ನ, ಸುವರ್ಣ ನಾಣ್ಯಗಳನ್ನು ಭೂಮಿಗೆ ಅರ್ಪಿಸಿದರು.

ಸನ್ಮಾನ
ಪೇಜಾವರ ಶ್ರೀಗಳು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸನ್ಮಾನಿಸಿದರು.

 

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!