Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಚಾಲನೆ

(ಸುದ್ದಿಕಿರಣ ವರದಿ)
ಉಡುಪಿ: ಜಗತ್ತಿನ ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ರಿಟೇಲ್ ಮಾರಾಟ ಸಂಸ್ಥೆಗಳಲ್ಲೊಂದಾಗಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಅಪ್ಪಟ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ಒಡವೆಗಳ ಪ್ರದರ್ಶನ ಮತ್ತು ಮಾರಾಟ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಇಲ್ಲಿನ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಉಡುಪಿ ಮಳಿಗೆಯಲ್ಲಿ ಚಾಲನೆ ನೀಡಲಾಯಿತು.

ರೂಪದರ್ಶಿಗಳಾದ ಮಿಸ್ಟರ್ ಅಂಡ್ ಮಿಸ್ ಟೀನ್ ಇಂಡಿಯಾದ ಶಿರಿಯನ್ ನಿಖಿತಾ ಜೋಸೆಫ್, ಟೀಮ್ ಕರ್ನಾಟಕ 2021ರ ದಿಶಾಲಿ, ಭರತನಾಟ್ಯ ಕಲಾವಿದೆ ಸಂಸ್ಕೃತಿ ಮತ್ತು ಟಾಪ್ ಮಾಡೆಲ್ ಆಫ್ ಇಂಡಿಯಾ ಸ್ಪರ್ಧಿ ಲಿಖಿತ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳ 13 ವಧುಗಳ ಆಭರಣಗಳ ವಿನ್ಯಾಸಗಳನ್ನು ಅನಾವರಣಗೊಳಿಸಲಾಯಿತು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ, ವ್ಯಾಪಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಎಂದಿಗೂ ಬದ್ಧವಾಗಿದೆ. ನಿಖರ ಉತ್ಪಾದನಾ ವೆಚ್ಚ, ಹರಳಿನ ಶುಲ್ಕ, ಆಭರಣಗಳ ಶುಲ್ಕ, ಆಭರಣಗಳ ಜೀವಿತಾವಧಿಯ ನಿರ್ವಹಣೆ, ಹಳೆಯ ಚಿನ್ನದ ಆಭರಣಗಳ ಮರು ಮಾರಾಟ ಸಂದರ್ಭದಲ್ಲಿ ಚಿನ್ನಕ್ಕೆ 100 ಪ್ರತಿಶತ ಮೌಲ್ಯ ಮತ್ತು ವಿನಿಮಯ ಶೂನ್ಯ ಕಡಿತ ಸೂಚುಸುವ ಪಾರದರ್ಶಕ ಬೆಲೆ ಸೇರಿದಂತೆ ಚಿನ್ನದ ಶುದ್ಧತೆ ಪ್ರಮಾಣೀಕರಿಸುವ ಶೇ. 100 ಬಿಐಎಸ್ ಹಾಲ್ ಮಾರ್ಕಿಂಗ್ ಐಜಿಐ ಮತ್ತು ಜಿಐಎ ಪ್ರಾಮಾಣಿಕೃತ ವಜ್ರಗಳು ಜಾಗತಿಕ ಮಟ್ಟದಲ್ಲಿ 28 ಆಂತರಿಕ ಗುಣಮಟ್ಟದ ಪರಿಶೀಲನೆ, ಮರು ಪಾವತಿಯ ಖಾತರಿ ಮತ್ತು ಜವಾಬ್ದಾರಿಯುತ ಮೂಲಗಳು ಮತ್ತು ನ್ಯಾಯಯುತ ಕಾರ್ಮಿಕ ಪದ್ಧತಿಯನ್ನು ಖಾತ್ರಿಪಡಿಸುತ್ತದೆ ಎಂದು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದರು.

ಮಾರ್ಕೆಟಿಂಗ್ ಮ್ಯಾನೇಜರ್ ರಾಘವೇಂದ್ರ ನಾಯಕ್, ತಂಝೀಮ್ ಶಿರ್ವ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!